ಕಾಂಗ್ರೆಸ್‌ ಪಕ್ಷದ ನಾಯಕರಾದ ಜಿತೇಂದ್ರ ಅವ್ಹಾದ್‌ ರವರು ಛತ್ರಪತಿ ಶಿವಾಜಿಯವರ ಬಗ್ಗೆ ಅವಹೇಳನಕಾರಿಯಾದ ಮತ್ತು ಅಕ್ಷೇಪಾರ್ಹವಾದ ಹೇಳಿಕೆಯನ್ನು ನೀಡಿದ್ದಾರೆ ಆದ್ದರಿಂದ ಅವರ ನಾಲಗೆಯನ್ನು ಕಟ್‌ ಮಾಡಿದವ್ರಿಗೆ 10 ಲಕ್ಷ ರೂ ಬಹುಮಾನವನ್ನು ನೀಡುತ್ತೇನೆಂದು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜಕೀಯ ನಾಯಕರು ಮಾತನಾಡುವ ಭರದಲ್ಲಿ ತಾವೇನು ಮಾತನಾಡುತ್ತಿದ್ದೇವೆ ಎನ್ನುವುದರ ಅಂದಾಜಿಲ್ಲದೆ ತಮ್ಮ ಎಲುಬಿಲ್ಲದ ನಾಲಗೆಯನ್ನು ಹರಿಬಿಡುವುದು ಹೊಸ ವಿಷಯವೇನಲ್ಲ. ಆದರೆ ಇಲ್ಲೊಬ್ಬರು ಕಾಂಗ್ರೆಸ್‌ ನಾಯಕನ ನಾಲಗೆಯನ್ನು ಕತ್ತರಿಸಿದರೆ ಅವರಿಗೆ 10 ಲಕ್ಷರೂ ಬಹುಮಾನ ಕೊಡುತ್ತೇವೆಂದು ಘೋಷಣೆಯೊಂದನ್ನು ಹೊರಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಜಿತೇಂದ್ರ ಅವ್ಹಾದ್‌ ಅವರ ವಿರುದ್ದ ಜಲ್ನಾದ ಪ್ರತಿಭಟನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿವಾಜಿ ಮಹಾರಾಜರ ಇತಿಹಾಸವನ್ನು ನಾಶಮಾಡಲು ವಿರೋಧಿಗಳು ಸಂಚನ್ನು ಹೂಡಿದ್ದಾರೆ. ಇತಿಹಾಸವನ್ನು ನಾಶಗೊಳಿಸಿದರೆ ಮರಾಠ ಚಕ್ರವರ್ತಿಯ ಅಪ್ರತಿಮ ಸಾಧನೆಗಳಿಗೆ ಅವಮಾನ ಮಾಡಿದಂತಾಗುತ್ತದೆ ಎಂದಿದ್ದಾರೆ.

Leave a Reply

Your email address will not be published. Required fields are marked *