ಶಿಗ್ಗಾವಿ ಕ್ಷೇತ್ರದಲ್ಲಿ ಯುವಕರ ಬೆಂಬಲ ದೊರೆಯುತ್ತದೆ ಮತ್ತು ಈ ಬಾರಿ ಚುನಾವಣೆಯಲ್ಲಿ ಜನ ನಮ್ಮ ಕೈ ಹಿಡಿಯುತ್ತಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶಿಗ್ಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾವಿಯಲ್ಲಿ ಯುವಕರ ಬೆಂಬಲ ದೊರೆಯಲಿದೆ ಮತ್ತು ಜನಶಕ್ತಿ ನಮ್ಮ ಪಕ್ಷದ ಪರವಾಗಿದೆ. ಒಂದು ವರ್ಷದಿಂದ ರಾಜ್ಯ ಸರ್ಕಾರದ ಕಳಫೆ ಆಡಳಿತದ ಬಗ್ಗೆ ಕಿಡಿಕಾರುತ್ತಿರುವ ಜನರುಪ್ರಜ್ಞಾವಂತರಾಗಿ ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ.

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರ ಕುಟುಂಬದ ಅಭ್ಯರ್ಥಿಗಳನ್ನು ಬಿಟ್ಟರೆ ಬೇರೆ ಯಾರಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಲ್ಲ. ಯಾಕೆಂದರೆ ಕುಮಾರಸ್ವಾಮಿಯವರ ಆಡಳಿತದ ಕ್ಷೇತ್ರವಾಗಿರುವುದರಿಂದ ಅವರ ವರ್ಚಸ್ಸು ಚೆನ್ನಾಗಿದೆ ಆದ್ದರಿಂದ ಜನರು ಈ ಸಲವೂ ಕಾಂಗ್ರೆಸ್‌ನ್ನು ತಿರಸ್ಕರಿಸುವುದರಲ್ಲಿ ಎರಡು ಮಾತಿಲ್ಲವೆಂದಿದ್ದಾರೆ.

Leave a Reply

Your email address will not be published. Required fields are marked *