ಬೆಂಗಳೂರು: ಧರ್ಮಸ್ಥಳ ಪ್ರಕರಣದ ವಿಚಾರವನ್ನು ವಿರೋಧಿಸಿ ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಪ್ರಾರಂಭಿಸಿದ್ದರು. ಅದೇ ರೀತಿ ಕಾಂಗ್ರೆಸ್‌ ನಾಯಕರೂ ಕೂಡಾ ಅದೇ ರೀತಿ ಧರ್ಮಸ್ಥಳ ಚಲೋ ಪ್ರಾರಂಭಿಸಿದ್ದಾರೆ.

ಕುಣಿಗಲ್‌ ಶಾಸಕ ರಂಗನಾಥ್‌ ನೇತೃತ್ವದಲ್ಲಿ ಕಾರ್‌ ರ್ಯಾಲಿ ಶುರುವಾಗಿದೆ. 300 ಕಾರುಗಳು ಕುಣಿಗಲ್‌ನಿಂದ ಧರ್ಮಸ್ಥಳಕ್ಕೆ ರ್ಯಾಲಿ ನಡೆಯುತ್ತದೆ.

ಧರ್ಮಸ್ಥಳ ಚಲೋ ರ್ಯಾಲಿಗೆ ಪಕ್ಷದ ಕಾರ್ಯಕರ್ತರ ಬೆಂಬಲವಿದ್ದು, ಇಂದು ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *