ಪಾಟ್ನಾ: ಕಳ್ಳಭಟ್ಟಿ ಸಾರಾಯಿಯನ್ನು ಕುಡಿದು 20ಮಂದಿ ಅಸುನೀಗಿರುವ ಘಟನೆಯು ಬಿಹಾರದ ಸಿವಾನ್ ಹಾಗೂ ಸರನ್ ಜಿಲ್ಲೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಕಳ್ಳಭಟ್ಟಿಯ ಸೇವನೆಯನ್ನು ಮಾಡಿ 6 ಮಂದಿ ಸಾವನ್ನಪ್ಪಿದ್ದು. 12 ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪರಿಶೀಲಿಸಿದ ಅಧಿಕಾರಿಗಳು ಮೃತಪಟ್ಟಿರುವವರ ಮತ್ತು ಚಿಕಿತ್ಸೆಯನ್ನು ಪಡೆಯುತ್ತಿರುವವರ ಯಾವುದೇ ಮಾಹಿತಿಗಳನ್ನು ಇದುವರೆಗೂ ತಿಳಿಸಿಲ್ಲ.
ಸಿವಾನ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಆದ ಮುಕುಲ್ ಕುಮಾರ್ ಗುಪ್ತಾರವರು ಮಾತನಾಡಿ, ಮಘಾರ್ ಮತ್ತು ಔರಿಯಾ ಪಂಚಾಯತ್‌ನ ವ್ಯಾಪ್ತಿಯಲ್ಲಿ ಮೂರು ಜನರು ಸಾವನ್ನಪ್ಪಿದ್ದು, ಬೆಳಗ್ಗೆ 7:30ರ ಹೊತ್ತಿಗೆ ಮಾಹಿತಿ ಸಿಕ್ಕಿದೆ. ವಿಷಯ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ತಂಡವನ್ನು ಕಳುಹಿಸಿ, 12 ಜನರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು. ಎಂದು ತಿಳಿಸಿದ್ದಾರೆ.