ಬೆಂಗಳೂರು: ಬಿಗ್‌ಬಾಸ್ ರಿಯಾಲಿಟಿ ಶೋ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಸ್ಪರ್ಧಿಗಳ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಗೆಲ್ಲಿಸಲು ಪ್ರಚಾರ ಮಾಡ್ತಿದ್ದರೆ, ಮತ್ತೊಂದು ಕಡೆ ರಾಜಕೀಯ ನಾಯಕರು ಕೂಡಾ ಸ್ಪರ್ದಿಗಳ ಪರ ಪ್ರಚಾರವನ್ನು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಿಗ್‌ಬಾಸ್ ಶುರುವಾದಾಗ ಮನೆಯಲ್ಲಿ ಒಟ್ಟು 22 ಜನರಲ್ಲಿ ಇದೀಗ ಕೇವಲ 6 ಮಂದಿ ಮಾತ್ರ ಉಳಿದುಕೊಂಡಿದ್ದಾರೆ.ಈ 6 ಜನರಲ್ಲಿ ಯಾರು ಬಿಗ್ಬಾಸ್ ಕಪ್ ಗೆಲ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಬಿಗ್‌ಬಾಸ್ ಸೀಜನ್ 1ರಿಂದ 11ರವರೆಗೂ ಒಂದು ರೀತಿಯಾದರೆ ಈ ಸೀಜನ್ ವಿಭಿನ್ನವಾಗಿದೆ ಏಕೆಂದರೆ ದೊಡ್ಮನೆಯಲ್ಲಿ ಉಳಿದ 6 ಸ್ಪರ್ಧಿಗಳ ಪರವಾಗಿ ರಾಜಕೀಯ ನಾಯಕರು ತಮ್ಮ ಕ್ಷೇತ್ರದ ಸ್ಪರ್ಧಿಗಳನ್ನು ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ದಾರತೆ ಎಂದರೆ ತಪ್ಪಾಗಲಾರದು.
ಬಿಗ್‌ಬಾಸ್ ಸ್ಪರ್ಧಿಗಳ ಪರವಾಗಿ ಶಾಸಕರು, ಮಾಜಿ ಸಚಿವರುಗಳಿಂದ ಸಾಮಾಜಿಕ ಜಾಲಾತಾಣಗಳಲ್ಲಿ ವೋಟ್ ಪಾಲಿಟಿಕ್ಸ್ ಶುರುವಾಗಿದ್ದು, ತಮ್ಮಕ್ಷೇತ್ರದ ಸ್ಪರ್ಧಿಗೆ ವೋಟ್ ಮಾಡಿ ಗೆಲ್ಲಿಸುವಂತೆ ಮತ ಬೇಟೆಯಾಡುತ್ತಿದ್ದು, ಇದು ರಾಜ್ಯ ರಾಜಕೀಯಕ್ಕಿಂತ ಕಡಿಮೆ ಏನಿಲ್ಲ ಎನ್ನುವಷ್ಟರ ಮಟ್ಟಿಗೆ ಸದ್ದು ಮಾಡುತ್ತಿದೆ ಎನ್ನಲಾಗಿದೆ.
ಎಲ್ಲರನ್ನೂ ತನ್ನ ತನವನ್ನು ಬಿಟ್ಟುಕೊಡದೆ ಎಲ್ಲರನ್ನು ರಂಜಿಸಿದ ಗಿಲ್ಲಿ ನಟನ ಪರವಾಗಿ ಮಳವಳ್ಳಿಯ ಶಾಸಕರಾದ ನರೇಂದ್ರ ಸ್ವಾಮಿ, ಮತ್ತು ಮಾಜಿ ಸಚಿವರಾದ ತಮ್ಮಣ್ಣ ಪ್ರಚಾರ ಮಾಡಿದರೆ, ಕರಾವಳಿ ಪ್ರತಿಭೆ ರಕ್ಷಿತಾ ಶೆಟ್ಟಿರ ಪರವಾಗಿ ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಬೆಂಬಲವನ್ನು ನೀಡುತ್ತಿದ್ದಾರೆ.
ಕಿರುತೆರೆ ನಟಿ ಕಾವ್ಯ ಪರವಾಗಿಕೆ.ಆರ್.ಪೇಟೆಯ ಹೆಚ್.ಟಿ.ಮಂಜು ಮತ್ತು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮತ ಬೇಟೆ ಮಾಡಿದ್ದು, ಇನ್ನೂ ರಘು ಪರವಾಗಿ ಮಾಜಿ ಸಚಿವರಾದ ಬಿ.ಸಿ.ಪಾಟೀಲ್ ವೋಟ್ ಮಾಡಿ ಗೆಲ್ಲಿಸುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಾರಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವೆ ತೀವ್ರ ಪೈಪೋಟಿ ಇದ್ದು, ರಾಜಕೀಯ ನಾಯಕರ ಈ ಬೆಂಬಲವು ಮತದಾನದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.
ನಾನು ಮೇಲೆ ಹೇಳಿದಂತೆ ರಾಜಕೀಯದ ಚುನಾವಣೆ ರೀತಿಯಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳ ಪರವಾಗಿ ಶಾಸಕರು, ಸಚಿವರೇ ಅಖಾಡಕ್ಕೆ ಇಳಿದಿರುವುದರಿಂದ ಗೆಲುವಿನ ಪಟ್ಟವನ್ನು ಯಾವ ಸ್ಪರ್ಧಿಯ ಪಾಲಾಗುತ್ತದೆ ಎಂಬುದನ್ನು ಕಾದು ನೋಡೋಣ.
