ಬಿಗ್‌ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ವಿಭಿನ್ನ ರೂಪ ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಲಿದ್ದು, ವಿಕೋಪಕ್ಕೆ ಹೋಗುವ ಸಂದರ್ಭ ಬಂದಿದ್ದರೂ ಕೂಡ ಕಿಚ್ಚ ಸುದೀಪ್‌ರವರ ವಾರದ ಕಥೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಅವರವರ ತಪ್ಪಿನ ಅರಿವು ಮೂಡಿಸಿ, ಜಗಳವನ್ನು ಕಂಟ್ರೋಲ್ ಮಾಡ್ತಿದ್ದರು.
ಕಿಚ್ಚ ಸುದೀಪ್ ತಮ್ಮ ಅಮ್ಮನ ಅಗಲಿಕೆಯಿಂದ ಈ ವಾರ ಪಂಚಾಯ್ತಿಯನ್ನು ನಡೆಸಲು ಅಸಾದ್ಯವಾದ ಕಾರಣ ಸ್ಯಾಂಡಲ್‌ವುಡ್‌ನ ಕಲಾವಿದರಾದ ಯೋಗರಾಜ್‌ಭಟ್ ಮತ್ತು ಸೃಜನ್ ಲೋಕೆಶ್‌ರನ್ನು ತಮ್ಮ ಬದಲಾಗಿ ಶೋ ಹೋಸ್ಟಿಂಗ್ ಮಾಡಲು ನೇಮಿಸಲಾಯಿತು.
ಯೋಗರಾಜ್‌ಭಟ್ ಮತ್ತು ಸೃಜನ್ ಲೋಕೆಶ್ ತಮಗೆ ವಹಿಸಿದ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳೀಬ್ಬರ ನಡುವೆ ಜಗಳ ಶುರುವಾಗಿದ್ದು, ಒಬ್ಬರ ಮೇಲೊಬ್ಬರು ಆರೋಪಗಳನ್ನು ಮಾಡಿಕೊಳ್ಳುತ್ತಾ ಜೋರಾಗಿಯೇ ವಾದ-ವಿವಾದವನ್ನು ನಡೆಸಿದ್ದಾರೆ.ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಇವರಿಬ್ಬರ ನಡುವೆ ಜಗಳ ಶುರುವಾಗಿದ್ದು, ಮಾತಿನ ಬಿರುಸು ತಾರಕಕ್ಕೇರಿದೆ.
ದೊಡ್ಮನೆಯಲ್ಲಿ ಎಲ್ಲರೂ ಎಲ್ಲರ ಜೊತೆಯಲ್ಲೂ ಚೆನ್ನಾಗಿಯೇ ಮಾತನಾಡಿಕೊಂಡು ಇರ್ತಾರೆ. ಆದರೆ ಅವರಿಲ್ಲದ ವೇಳೆ ತಮ್ಮ ಅಸಮದಾನವನ್ನು ಹೊರಹಾಕುತ್ತಾರೆ.ಹೀಗೆಯೇ ತ್ರಿವಿಕ್ರಮ್ ಉಗ್ರಂ ಮಂಜು ಜೊತೆಆಡಿರುವ ಮಾತುಗಳು ಮೋಕ್ಷಿತಾ ಕಿವಿಗೆ ಬಿದ್ದಿದ್ದು,ತೇಟ್ ಹಾವು ಮುಂಗುಸಿಗಳ ರೀತಿಯಲ್ಲಿಯೇ ಜಗಳವಾಡಿದ್ದಾರೆ.
ತ್ರಿವಿಕ್ರಮ್ ಉಗ್ರಂ ಮಂಜು ಜೊತೆ ಮಾತನಾಡುವಾಗ ಮೋಕ್ಷಿತಾ 10 ವಾರಕ್ಕೆ ಬಂದಿರೋದು , 10 ವಾರಗಳ ಬಳಿಕ ಅವರ ಅವಶ್ಯಕತೆಯಿರುವುದಿಲ್ಲ ಎನ್ನುವ ಮಾತುಗಳನ್ನು ಹೇಳಿದ್ದರು.ಈ ಮಾತುಗಳು ಮೋಕ್ಷಿತಾ ಕಿವಿಗೆ ಬೀಳುತ್ತಿದ್ದಂತೆ ನಾನು ಇಷ್ಟೇ ವಾರ ಇರ್ತಿನಿ ಎಂದು ಡಿಸೈಡ್ ಮಾಡಲು ಇವರ್ಯಾರು? ಎಂದು ಪ್ರಶ್ನಿಸಿದ್ದಾರೆ.ಅದಕ್ಕೆ ಪ್ರತಿಕ್ರಿಯಿಸಿದ ತ್ರಿವಿಕ್ರಮ್ “ಆಯ್ತಮ್ಮಾ ನೀನು ಫಿನಾಲೆಗೆ ಹೋಗಮ್ಮ” ಎಂದು ಹೇಳಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಮೋಕ್ಷಿತಾ ಇಲ್ಲಿ ನಾವೆಲ್ಲಾ ಏನು ಅಲ್ಲಾ? ಯಾವ್ದೊ ಒಂದು ಸೀರಿಯಲ್ ಮಾಡ್ಕಂಡು ಬಂದಿದ್ದೀವಿ? ಅಷ್ಟೇ, ನೀವು ಕೂಡಾ ಏನು ಅಲ್ಲ ಅನ್ನೋದು ತಿಳಿದಿರಲಿ. ಗೋಮುಖ ವ್ಯಾಘ್ರನ ರೀತಿ ಆಟವನ್ನು ಆಡ್ತೀದ್ದೀರಾ ಇವತ್ತಿನಿಂದ ನನ್ನ ಆಟ ಶುರು ಎಂದು ಅಖಾಡಕ್ಕೆ ಇಳಿದಿದ್ದಾರೆ.
ಇದನ್ನೆಲ್ಲಾ ಕೇಳಿಸಿಕೊಂಡ ತ್ರಿವಿಕ್ರಮ್ ನಟಿ ಮೋಕ್ಷಿತಾ ಮಾತಿಗೆ ನೀವು ಏನೆಂದು ತಿಳಿದುಕೊಂಡಿದ್ದೀರಾ ಎನ್ನುವುದನ್ನು ಸಾಬೀತುಪಡಿಸಿ ಎಂದು ತಿರುಗೇಟನ್ನು ನೀಡಿದ್ದಾರೆ.