ಬೆಂಗಳೂರು: ʼಮುಗಿಲ್ ಪೇಟೆʼ ನಿರ್ದೇಶಕನಿಗೆ ಗನ್ ತೋರಿಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿನಿಮಾ ನಟ ತಾಂಟವ್‌ರಾಮ್ ನಿರ್ದೇಶಕ ಭರತ್ ಎಂಬುವವರ ಮೇಲೆ ಕೊಲೆಗೆ ಯತ್ನಿಸಿದ್ದು, ಈ ಘಟನೆಯು ಚಂದ್ರಾ ಲೇಔಟ್‌ನಲ್ಲಿ ನಡೆದಿದೆ ಎನ್ನಲಾಗಿದೆ.
ನಟ ತಾಂಡವ್ ರಾಮ್ ʼಮುಗಿಲ್‌ಪೇಟೆʼ ನಿರ್ದೇಶಕ ಭರತ್ ಎಂಬುವವರ ಮೇಲೆ ಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.ನಿರ್ದೇಶಕ ಭರತ್ ನಿರ್ದೇಶನದ ಸಿನಿಮಾವನ್ನು ಅರ್ಧಕ್ಕ ಎನಿಲ್ಲಿಸಿರುವ ಕಾರಣ ಕೊಲೆ ಯತ್ನ ನಡೆದಿದೆ ಎನ್ನಲಾಗಿದೆ.
ಭೂಮಿಗೆ ಬಂದ ಭಗವಂತ, ಜೋಡಿಹಕ್ಕಿ, ಧಾರಾವಾಹಿಗಳಲ್ಲಿ ನಟಿಸಿರುವ ತಾಂಡವ್‌ರಾಮ್‌ರನ್ನು ನಿರ್ದೇಶಕ ಭರತ್ ತಮ್ಮ ಹೊಸ ಸಿನಿಮಾದಲ್ಲಿ ತಾಂಟವ್‌ರಾಮ್‌ನನ್ನು ಹೀರೋ ಆಗಿ ನಟನೆ ಮಾಡಲು ಅವಕಾಶ ನೀಡಿದ್ದು, ಕಾರಾಣಾಂತರದಿಂದ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿರುವ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸದ್ಯ ತಾಂಡವ್‌ರಾಮ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ. ನಿರ್ದೇಶಕ ಭರತ್ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.