ವಿಧಾನಸಭೆ ಶಾಸಕ ಮತ್ತು ಎರಡು ಸಲ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆಯವರನ್ನು ವಿಧಾನಸಭೆಯ ಸಚಿವಾಲಯ ʻಶ್ರೀಮತಿ ಪ್ರಿಯಾಂಕ ಎಂ.ಖರ್ಗೆʼ ಎಂದು ಕರೆದಿದೆ.
ರಾಜ್ಯದ ಹಿರಿಯ ರಾಜಕಾರಣಿಯ ಪುತ್ರರಾದ ಪ್ರಿಯಾಂಕ್ ಎಂ. ಖರ್ಗೆಯವರ ಹೆಸರನ್ನು ಶ್ರೀಮತಿ ಪ್ರಿಯಾಂಕ್ ಖರ್ಗೆ ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ನಗೆಪಾಟಲಿಗಿಡಾಗಿರುವುದು ತಿಳಿದುಬಂದಿದೆ.
ಸಚಿವ ಬಿ.ಸಿ.ನಾಗೇಶ್‌ರವರಿಗೆ ʻಚುಕ್ಕೆ ಗುರುತಿಲ್ಲದ ಪ್ರಶ್ನೆʼ ಕೇಳಿದ್ದು, ಈ ಪ್ರಶ್ನೆಗೆ ಉತ್ತರ ನೀಡಿದ ಶಿಕ್ಷಣ ಇಲಾಖೆಯು ʼಶ್ರೀʼ ಬರೆಯುವ ಬದಲು ʻಶ್ರೀಮತಿʼ ಎಂದು ಬರೆದಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.