ಮೀರತ್: ಭಾರತೀಯ ಸೈನಿಕರ ಮೇಲೆ ಟೋಲ್ ಪ್ಲಾಜಾ ಸಿಬ್ಬಂದಿ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆಯು ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿರುವುದು ತಿಳಿದುಬಂದಿದೆ.
ಸೈನಿಕರ ಮೇಲೆ ಹತ್ಯೆ ಮಾಡಿರುವ ಪ್ರಕರಣವು ಸರೂಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಭುನಿ ಟೋಲ್ ಪ್ಲಾಜಾದಲ್ಲಿ ನಡೆದಿದ್ದು, ಘಟನೆಯು ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದು ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಸೈನಿಕರನ್ನು ಸುಮಾರು 10 ಜನರು ಮನಬಂದಂತೆ ಥಳಿಸುತ್ತಿರುವುದನ್ನು ನೀವು ಕಾಣಬಹುದು.
