ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ನಟ ದರ್ಶನ್ ಅಭಿಮಾನಿಗಳನ್ನುದ್ದೇಶಿ ಕಿಚ್ಚ ಸುದೀಪ್ ನೀಡಿದ ಹೇಳಿಕೆಯಿಂದ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ಶುರುವಾಗಿದ್ದು, ಸ್ಟಾರ್ ವಾರ್‌ಗೆ ಮುನ್ನುಡಿ ಬರೆದ್ರಾ ಕಿಚ್ಚ ಸುದೀಪ್? ಎನ್ನುವ ಸಂಶಯ ಎಲ್ಲರ ಮನದಲ್ಲೂ ಮೂಡುವುದರಲ್ಲಿ ಯಾವುದೇ ಉರುಳಿಲ್ಲ.
ಸ್ಟಾರ್ ವಾರ್ ಪ್ರಾರಂಭವಾಗುವ ಬೆನ್ನಲ್ಲೇ ನಟ ಕಿಚ್ಚ ಸುದೀಪ್ …….. All set?? ನಿಮ್ಮ ಸ್ಕ್ರೀನ್ ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ಪ್ರಶ್ನಾರ್ಥಕವಾಗಿ ಟ್ವೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಹುಬ್ಬಳ್ಳಿಯಲ್ಲಿ ತಮ್ಮ ನಟನೆಯ ಮಾರ್ಕ್ ಚಲನಚಿತ್ರದ ಪ್ರೀ-ರಿಲೀಸ್ ಇವೆಂಟಿನಲ್ಲಿ ಮಾತನಾಡಿದ ಕಿಚ್ಚ ಸುದೀಪ್ “ನಮ್ಮ ಅಭಿಮಾನಿಗಳು ನೀವು ಸುಮ್ಮನೇ ಇರಬೇಡಿ.ಈ ಇವೆಂಟನ್ನು ಹುಬ್ಬಳ್ಳಿಯಲ್ಲಿ ಯಾಕೆ ಮಾಡುತ್ತೀದ್ದೇವೆ ಎಂದರೆ, ಹುಬ್ಬಳ್ಳಿಯಲ್ಲಿ ಮಾತನಾಡಿದ್ರೆ ಕೆಲವೊಬ್ಬರಿಗೆ ಮನದಟ್ಟಾಗುತ್ತದೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.
ಕಿಚ್ಚಸುದೀಪ್ ಮಾತಿಗೆ ಪ್ರತಿಕ್ರಿಯಿಸಿದ ವಿಜಯಲಕ್ಷ್ಮೀ ದರ್ಶನ್, ದರ್ಶನ್ ಜೈಲಿನಲ್ಲಿರುವಾಗ ಕೆಲವರು ವೇದಿಕೆಯ ಮೇಲೆ ದರ್ಶನ್ ಮತ್ತು ಫ್ಯಾನ್ಸ್ ಬಗ್ಗೆ ಮಾತನಾಡ್ತಾರೆ. ದರ್ಶನ್ ಹೊರಗಡೆಯಿದ್ದಾಗ ಈ ರೀತಿಯ ಹೇಳಿಕೆ ನೀಡುವವರು ಬೆಂಗಳೂರಿನಲ್ಲಿ ಇದ್ದರೋ ಇಲ್ವೋ ಎಂಬಂತೆ ಇರ್ತಾರೆ, ಇಂತವರ ಮಾತಿಗೆ ಉದ್ವೇಗ ಆಗದಣತೆ ತಾಳ್ಮೆಯಿಂದಿರಿ ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಎಂದು ತಿರುಗೇಟನ್ನು ನೀಡಿದ್ದಾರೆ.

