ಯಲಹಂಕ: ನಾಳೆಯಿಂದ 5 ದಿನಗಳವರೆಗೆ ಬೆಂಗಳೂರಿನ ಯಲಹಂಕದಲ್ಲಿ ಏರೋ ಇಂಡಿಯಾದ ಏರ್ ಶೋ ಶುರುವಾಗಲಿದ್ದು ಯಲಹಂಕ ಮತ್ತು ಬಳ್ಳಾರಿ ರಸ್ತೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ನಾಳೆಯಿಂದಲೇ ಏರ್ ಶೋ ಪ್ರಾರಂಭವಾಗುದರಿಂದ, ಬಳ್ಳಾರಿ ರಸ್ತೆಯ ಯಲಹಂಕದ ಸುತ್ತಾಮುತ್ತಾ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮುಂಜಾಗೃತ ಕ್ರಮವನ್ನ ಕೈಗೊಳ್ಳಲಾಗಿದ್ದು, ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ ಬೆಂಗಳೂರು ಸಂಚಾರಿ ಪೊಲೀಸರು.
ನಾಳೆ ಬೆಳಗ್ಗೆ 8 ರಿಂದ 11.30 ರವರೆಗೆ ಬಳ್ಳಾರಿ ರೋಡಿನ ಎಸ್ಟೀಮ್ ಮಾಲ್‌ನಿಂದ ಸಂಪೂರ್ಣವಾಗಿ ವಾಹನಗಳ ಚಾಲನೆಯನ್ನು ನಿಷೇಧಿಸಲಾಗಿದ್ದು ಕೇವಲ ಏರ್ ಶೋ ಪಾಸ್ ಇರುವ ವೆಹಿಕಲ್‌ಗಳಿಗೆ ಮಾತ್ರ ಅವಕಾಶವಿರುತ್ತದೆ. ಪಾಸ್ ಇಲ್ಲದೆ ಇರುವವರು ಪರ್ಯಾಯ ರಸ್ತೆಗಳನ್ನು ಬಳಸಬೇಕಾಗುತ್ತದೆ. ಮತ್ತೊಂದು ವಿಷಯವೆಂದರೆ ಲಾರಿಯಂತಹ ಬೃಹತ್ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ವಿಭಾಗದವರಿಂದ ಮಾಹಿತಿ ತಿಳಿದುಬಂದಿದೆ.