ಬೆಂಗಳೂರು: ನಟಿ ರಮ್ಯಾಗೆ ಅಶ್ಲೀಲ ಮೇಸೆಜ್ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ, ಕೆಟ್ಟ ಕೆಟ್ಟ ಮೆಸೆಜ್ ಕಳುಹಿಸಿದ 48 ಜನರ ಐಪಿ ವಿಳಾಸಗಳನ್ನು ಪತ್ತೆಹಚ್ಚಿದ್ದಾರೆ.
ನಟಿಗೆ ಅಶ್ಲೀಲವಾಗಿ ಸಂದೇಶವನ್ನು ಕಳುಹಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದು, ಸದ್ಯ 48 ಜನರ ಐಪಿ ವಿಳಾಸಗಳನ್ನು ಪತ್ತೆಹಚ್ಚಿದ್ದಾರೆ. ಇದರ ಬಗ್ಗೆ 15 ಜನರ ಗುರುತಿಸಿ, 4 ಜನರನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಹಲವಾರ ಜಿಲ್ಲೆಯವರು ಅಶ್ಲೀಲ ಮೆಸೆಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೆಲವರನ್ನು ಕರೆದು ವಾರ್ನಿಂಗ್ ಮಾಡಲಾಗಿದೆ.ಕೆಲವರು ಗೊತ್ತಾಗದೆ ಸಂದೇಶ ಕಳುಹಿಸಿದವರು ಕ್ಷಮೆಯನ್ನು ಕೇಳಿದರೆ, ಮತ್ತೆ ಕೆಲವರು ತಮ್ಮ ಐಪಿ ಆಡ್ರೆಸ್ ಬ್ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾರೆ.
