ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಭವಿಷ್ಯವನ್ನು ಕೋರ್ಟ್ ಇಂದು ನಿರ್ಧಾರ ಮಾಡಲಿದೆ.ಈ ತೀರ್ಪಿನಿಂದ ನಟ ದರ್ಶನ್ ಜೈಲಿನ ಪಾಲಾಗ್ತಾರೋ? ಅಥವಾ ಅವರಿಗೆ ಬೇಲ್ ಭಾಗ್ಯ ಸಿಗುತ್ತದೊ? ಎನ್ನುವುದನ್ನು ಕೋರ್ಟ್ ತಿರ್ಮಾನಿಸಲಿದೆ ಎನ್ನಲಾಗಿದೆ.
ನಟ ದರ್ಶನ್ ಮತ್ತು ಸಂಗಡಿಗರ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವೂ ಇಂದು ಆದೇಶವನ್ನು ಪ್ರಕಟಿಸಲಿದ್ದು, ಅರ್ಜಿಯ ವಿಚಾರಣೆಯನ್ನು ನಡೆಸಿದ ನಗರದ 57ನೇ ಸಿಸಿಹೆಚ್ ನ್ಯಾಯಾಲಯದ ಎಸ್.ಪಿಪಿ ಪ್ರಸನ್ನಕುಮಾರ್ಅವರು ಮಂಡನೆಯನ್ನು ಆಲಿಸಿದ ನಂತರ ಜಾಮೀನು ಆದೇಶವನ್ನು ಅಕ್ಟೋಬರ್ 14ಕ್ಕೆ ಕಾಯ್ದಿರಿಸಲಾಗಿತ್ತು.