ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸದ್ಯ ಜೈಲಿನಲ್ಲಿರುವ ನಟ ವಾರ ಜಾಮೀನು ಅರ್ಜಿಯ ಆದೇಶವನ್ನು ನಾಳೆ ಅಂದರೆ ಅಕ್ಟೋಬರ್ 30ಕ್ಕೆ ಕಾಯ್ದಿರಿಲಾಗಿದೆ ಎಂದು ತಿಳಿದುಬಂದಿದೆ.
ನಟ ದರ್ಶನ್ ಪರವಾಗಿ ವಾದ ಮಂಡಿಸಿರುವ ವಕೀಲ ಸಿ.ವಿ. ನಾಗೇಶ್, ನಮ್ಮ ಕಕ್ಷಿದಾರರಿಗೆ ಎಲ್ 5, ಎ1 ನಡುವೆ ಡಿಸ್ಕ್ ಊದಿಕೊಂಡಿದ್ದು,ಈ ಸಮಸ್ಯೆಯಕಾರಣದಿಂದ ಮುಂದಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಮತ್ತಷ್ಟು ಉಲ್ಬಣವಾವಗಿ ಬಾಧಿಸಬಹುದು.ಆದ್ದರಿಂದ ನಟ ದರ್ಶನ್ರವರಿಗೆ ಚಿಕಿತ್ಸೆಯ ಅಗತ್ಯವಿರುವುದರಿಂದ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದು, ನಾವು ಕೇಳುತ್ತಿರುವುದು ಕೇವಲ ಮಧ್ಯಂತರ ಜಾಮೀನು ಅಷ್ಟೇ. ಹೀಗಾಗಿ ಕೋರ್ಟ್ ನಮ್ಮ ಮನವಿಯನ್ನು ಪರಿಗಣಿಸಿ, ಜಾಮೀನು ನೀಡಬೇಕು ಎಂದು ವಾದಿಸಿದ್ದಾರೆ.
ದರ್ಶನ್ ಪರ ವಕೀಲ ನಾಗೇಶ್ ಹಾಗೂ ಎಸ್ಪಿಪಿ ಪ್ರಸನ್ನಕುಮಾರ್ ಮಂಡಿಸಿದ ವಾದ-ಪ್ರತಿವಾದವನ್ನು ಆಲಿಸಿದ ಹೈಕೋರ್ಟ್, ನಟ ದರ್ಶನ್ ಸಲ್ಲಿಸಿದಂತಹ ಜಾಮೀನು ಅರ್ಜಿಯ ತೀರ್ಪನ್ನು ಅ.30 ರಂದು ಪ್ರಕಟಿಸುವುದಾಗಿ ಆದೇಶವನ್ನು ಕಾಯ್ದಿರಿಸಿದೆ. ಹಾಗಾಗಿ ನಟ ದರ್ಶನ್ಗೆ ಜೈಲಾ? ಅಥವಾಬೇಲಾ? ಎಂಬ ಪ್ರಶ್ನೆಗೆ ಉತ್ತರ ನಾಳೆ ಸಿಗಲಿದೆ. ನೋಡೋಣ ದೀಪಾವಳಿ ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ಗೆ ಬಿಡುಗಡೆಯ ಭಾಗ್ಯ ಸಿಗುತ್ತದಾ? ಇಲ್ವಾ? ಎಂಬುದನ್ನು ಕಾದು ನೋಡೋಣ.