ಬಿಹಾರ SIRಗೆ ಸಾಕ್ಷಿಯಾಗಿ (ಪುರಾವೆಯಾಗಿ) ಆಧಾರ್‌ ಕಾರ್ಡನ್ನು ಸ್ವೀಕರಿಸಬೇಕೆಂದು ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.

ವೋಟರ್‌ ಐಡಿ ಪಟ್ಟಿಯ ಕುರಿತು ಅರ್ಜಿಗಳ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್‌ , ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಮತದಾರನ್ನು ಮರು ಸೇರ್ಪಡೆ ಮಾಡಲು ಆನ್‌ಲೈನ್‌ನ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಎಂದು ತಿಳಿಸಿದೆ.

ಮತದಾರರ ಪಟ್ಟಿಯ 11 ದಾಖಲೆಗಳಲ್ಲಿ ಯಾವುದಾದರೂ 1 ನ್ನು ಸಲ್ಲಿಸಬೇಕಾಗುತ್ತದೆ.ಇನ್ನು SIR ವೇಳೆ ಮತದಾರರ ಪಟ್ಟಿಯಿಂದ 65ಲಕ್ಷ ಮತದಾರರನ್ನು ಚುನಾವಣಾ ಆಯೋಗವೂ ತೆಗೆದುಹಾಕಿದೆ. ವಿಚಾರದ ಕುರಿತು ಬಿಹಾರದಲ್ಲಿರುವ ರಾಜಕೀಯ ಪಕ್ಷಗಳು ಏಕೆ ಸಹಾಯ ಮಾಡಲಿಲ್ಲವೆಂದು ಪ್ರಶ್ನಿಸಿದೆ.

ಆಗಸ್ಟ್‌ 23 ಮತ್ತು 24ಕ್ಕೆ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ನಡೆಯಲಿರುವ ಮತದಾನ ಹಕ್ಕು(ವೋಟರ್‌ ಅಧಿಕಾರ)  ಯಾತ್ರೆಗೆ ಡಿಸಿಎಂ ಡಿಕೆಶಿವಕುಮಾರ್‌  ಆಗಮಿಸಲಿದ್ದು, ಸಿಎಂ ಸಿದ್ದರಾಮಯ್ಯನವರೂ ಕೂಡಾ ಕೈಜೋಡಿಸಿಲಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *