ಸಕಲೇಶಪುರದ ಹೆತ್ತೂರಿನ ಬಳಿ ಇರುವ ಬೇರುಗುಂಡಿ ಬೆಟ್ಟದಲ್ಲಿ ನಾಳೆ (05, ಫೆಬ್ರವರಿ 2023) ಹಾಸನದ ರಂಗಹೃದಯ ತಂಡದವರು ಚಾರಣ, ನಾಟಕ ಮತ್ತು ಕಾಡೂಟದ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಕಾಡಂಚಿನಲ್ಲಿರುವ ರೈತಕುಟುಂಬ ಮತ್ತು ಬಡರೈತರ ಬವಣೆಗಳನ್ನು ಕುರಿತ ನಾಟಕ ʼನಿಲುವಂಗಿ ಕನಸುʼ. ಮಲೆನಾಡಿನ ಅಪ್ಪಟ ಸಾಹಿತಿ ಹಾಡ್ಲಹಳ್ಳಿ ನಾಗರಾಜ್‌ ಅವರ ನಿಲುವಂಗಿ ಕನಸು ಎಂಬ ಕಾದಂಬರಿಯನ್ನು ರಂಗಕರ್ಮಿ ಪ್ರಸಾದ್‌ ರಕ್ಷಿದಿ ನಾಟಕಪಠ್ಯವಾಗಿ ರೂಪಾಂತರಿಸಿದ್ದಾರೆ. ಅದನ್ನು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಟ ಉಲಿವಾಲ ಮೋಹನ್‌ ಕುಮಾರ್‌ ಅವರು ನಿರ್ದೇಶಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಹಲವಾರು ಪ್ರದರ್ಶನ ಕಂಡಿರುವ ಈ ನಾಟಕ, ಕಳೆದ ವರ್ಷ ಕಾದಂಬರಿ ಘಟಿಸಿರುವ ಪ್ರದೇಶಗಳಲ್ಲಿ ಒಂದಾದ ಎಮ್ಮೆಗುಂಡಿಯ ಕಾಡಿನಲ್ಲಿ ಪ್ರದರ್ಶನ ಕಂಡಿತ್ತು.

ಅಂತಹುದೇ ಪ್ರಯೋಗವನ್ನು ಇದೀಗ ಮತ್ತೊಂದು ಪ್ರದೇಶ ಬೇರುಗುಂಡಿ ಬೆಟ್ಟದಲ್ಲಿ ಜರುಗುತ್ತಿದೆ. ಬೆಳಿಗ್ಗೆ 8ಕ್ಕೆ ಮೆಕ್ಕಿರಮನೆಯಿಂದ ಶುರುವಾಗುವ ಚಾರಣ, 10 ಗಂಟೆಗೆ ಬೇರುಗುಂಡಿ ಬೆಟ್ಟದಲ್ಲಿ ಕೊನೆಗೊಳ್ಳಲಿದೆ. ಅಲ್ಲಿಯೇ ನಾಟಕ ಪ್ರದರ್ಶನವಿದ್ದು, ನಾಟಕ ಮುಗಿದ ನಂತರ ಕಾಡೂಟ ಅಂದರೆ; ಮಾಂಸಾಹಾರ ಮತ್ತು ಸಸ್ಯಾಹಾರದ ಊಟ ಇರುತ್ತದೆ. ನೊಂದಾಯಿಸಿದ ಪ್ರತಿಯೊಬ್ಬರಿಗೂ ಹಾಡ್ಲಹಳ್ಳಿ ನಾಗರಾಜ್‌ ಅವರ ಮೂರು ಕೃತಿಗಳು ಕೊಡುಗೆಯಾಗಿ ಸಿಗಲಿದೆ.

Leave a Reply

Your email address will not be published. Required fields are marked *