ನವದೆಹಲಿ: ಕಾಂಗ್ರೆಸ್‌ನ ಕೆಲವು ನಾಯಕರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ಟನ್ನು ಒಪ್ಪಿಕೊಂಡಿದ್ದರೆ, ಇನ್ನುಳಿದ ನಾಯಕರು ಟೀಕೆ ಮಾಡಿದ್ದಾರೆ.
ಈ ಬಜೆಟ್‌ನಲ್ಲಿ ಕೆಲವು ಉತ್ತಮ ಅಂಶಗಳಿವೆ ಇದರಿಂದ ಬಡಗ್ರಾಮೀಣ ಕಾರ್ಮಿಕರಿಗೆ, ಉದ್ಯೋಗ ಮತ್ತು ಹಣದುಬ್ಬರದಂತಹ ಮೂಲಭೂತ ಪ್ರಶ್ನೆಗಳಿಗೆ ಇನ್ನೂ ಉತ್ತರ ಬರುವ ನಿರೀಕ್ಷಣೆಯಲ್ಲಿದ್ದೇವೆ ಎಂದು ಶಶಿ ತರೂರ್ ತಿಳಿಸಿದ್ದಾರೆ.
ಈ ಬಜೆಟ್ಟಿನಲ್ಲಿ ರಾಷ್ಟ್ರಪತಿಗಳ ಭಾಷಣ ಮತ್ತು ಆರ್ಥಿಕ ಸಮೀಕ್ಷೆ ರಿಪಿಟ್ ಆಗಿದೆ. ನಾನು ಕಡಿಮೆ ತೆರಿಗೆ ಪದ್ದತಿ ಮತ್ತು ಯಾವುದೇ ತೆರಿಗೆ ಕಡಿತಗಳಾದರೂ ಸ್ವಾಗತಾರ್ಹ, ಜನರಿಗೆ ಹೆಚ್ಚು ಹಣ ಸಿಕ್ಕರೆ ದೇಶದ ಆರ್ಥಿಕತೆ ಹೆಚ್ಚಲು ಇದು ಒಳ್ಳೆಯ ಮಾರ್ಗ ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಪ್ರತಿಕ್ರಿಯೆ.
ಈ ಬಜೆಟ್ ಲಾಭವೂ ಕೇವಲ ದೊಡ್ಡ ದೊಡ್ಡ ಕೈಗಾರಿಕೊದ್ಯಮಿಗಳಿಗೆ ಮಾತ್ರ ಸೀಮಿತವಾದಂತಿದೆ, ಮಧ್ಯಮ ವರ್ಗದವರೂ ಮುಳುಗಿದಂತೆ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಹೇಳಿದ್ದಾರೆ.
ಇದು ಕಾರ್ಪೊರೆಟ್ ಪರವಾದ ಬಜೆಟ್ ಆಗಿದೆ ಇದು ಅದಾನಿ ಸಂಸ್ಥೆಯನ್ನು ಉದ್ದಾರ ಮಾಡಿ ಸಾಮಾನ್ಯ ಜನರನ್ನು ಕಡೆಗಣಿಸಿದೆ ಇದು ಅದಾನಿಗೆ, ಅಂಬಾನಿಗೆ, ಮತ್ತು ಗುಜರಾತಿಗೆ ಸಂಬಂಧಿಸಿದ್ದಾಗಿದೆ ಎಂದು ಕಾಂಗ್ರೆಸ್ ಸಂಸದ ಕೆ.ಸುರೇಶ್ ಆರೋಪ ಮಾಡಿದ್ದಾರೆ.
ದೇಶದಲ್ಲಿ 18 ಲಕ್ಷ ರೂಪಾಯಿ ಸಾಲದ ಬಗ್ಗೆ ಹಣಕಾಸು ಸಚಿವರು ಏನನ್ನೂ ಹೇಳಲಿಲ್ಲವಾದ್ದರಿಂದ ಈ ಬಜೆಟ್ ನಮ್ಮ ದೇಶವನ್ನು ಭೂತಕಾಲಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಕಟುವಾಗಿ ಟೀಕಿಸಿದ್ದಾರೆ.