ಕಾಂಗ್ರೆಸ್ಸನ್ನು ಸೋಲಿಸಲು ಸಿದ್ದರಾದ್ರ ಜಮೀರ್! ಇದಕ್ಕಾಗಿ 500 ಕೋಟಿ ಹಣ ಪಡೆದ್ರಾ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್!? ಹೌದು! ಕಾಂಗ್ರೆಸ್ ಪಕ್ಷದ ವಿರುದ್ದವೇ ತಿರುಗಿಬಿದ್ದು ಸೋಲಿಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಆರೋಪ ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ತೆಲಂಗಾಣ ಮುಖ್ಯಮಂತ್ರಿಯಾದ ಕೆ.ಚಂದ್ರಶೇಖರ್ ಜೊತೆ ಕೈ ಮಿಲಾಯಿಸಿದ್ದಾರೆ, ಇದಕ್ಕೆ 500 ಕೋಟಿ ಹಣವನ್ನ ಪಡೆದುಕೊಂಡಿದ್ದಾರೆ ಎಂದು ತೆಲಂಗಾಣ ಕಾಂಗ್ರಸ್ ಮುಖ್ಯಸ್ಥರು ಆರೋಪ ಮಾಡಿದ್ದಾರೆ.
ಕಾಂಗೆಸ್ ಪಕ್ಷವನ್ನ ಸೋಲಿಸಲು ತೆಲಂಗಾಣದ ಜೊತೆ ಕೈಜೋಡಿಸಿರುವುದು ತಿಳಿದ ರಣದೀಪ್ ಸುರ್ಜೇವಾಲಾ ಜಮೀರ್ ಗೆ ಬಲಾವ್ ನೀಡಿ ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರೇವಂತ್ ರೆಡ್ಡಿ ತಿಳಿಸಿದ್ದಾರೆ.