ಬೆಂಗಳೂರು: ಪಂಚಾಯತಿ ಎಲೆಕ್ಷನ್‌ನಲ್ಲಿ ಬಿಜೆಪಿ ವಿಜಯವನ್ನು ಸಾಧಿಸಿ ಬಿಜೆಪಿ ಅಲೆಯನ್ನು ಎಬ್ಬಿಸಿದೆ. ರಾಜ್ಯ 4 ಕಡೆಯಲ್ಲಿಯೂ ಕಾಂಗ್ರೆಸ್‌ ಮಕಾಡೆ ಮಲಗಿದೆ.ರಾಜ್ಯದಲ್ಲಿ ಮತ್ತೊಮ್ಮೆ ಚುನಾವಣೆ ನಡೆದರೆ ಬಿಜೆಪಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವೂ ಶಿಥಿಲಾವಸ್ಥೆಯಲ್ಲಿದೆ.ರಾಹುಲ್‌ ಗಾಂಧಿ ಪಕ್ಷ ಕಟ್ಟುತ್ತೀನಿ ಎಂದು ಹೇಳಿಕೆ ನೀಡುತ್ತಿದ್ದರು. ಪಕ್ಷದವರೇ ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕೆಲಸಕ್ಕೆ ಬಾರದವರು ಯೂಸ್‌ಲೆಸ್‌ ಎಂದು ಹೇಳುತ್ತಿದ್ದು, ಪ್ರೀಯಾಂಕಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ರಾಬರ್ಟ್‌ ವಾದ್ರಾ ಹೇಳ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

Leave a Reply

Your email address will not be published. Required fields are marked *