ನವದೆಹಲಿ: ದ್ವೇಷಭಾಷಣದ ಮಸೂದೆಯನ್ನು ಕರ್ನಾಟಕ ಗೌರ್ನಮೆಂಟ್ ಜನರ ಬಾಯಿಯನ್ನು ಮುಚ್ಚಿಸುವ ಸಲುವಾಗಿ ಅಂಗೀಕಾರ ಮಾಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ದ್ವೇಷಭಾಷಣದ ಮಸೂದೆಯನ್ನು ಅಂಗೀಕಾರ ಮಾಡುವ ಮೂಲಕ ಸಂವಿಧಾನ ನಮೆಗೆ ಕೊಟ್ಟಿರುವ ವಾಕ್‌ಸ್ವಾತಂತ್ರ್ಯಕ್ಕೆ ಮುಟ್ಟುಗೋಲು ಹಾಕಲು ಮಾಡಿರುವ ಯೋಜನೆಯಾಗಿದೆ. ರಾಜ್ಯ ಸರ್ಕಾರದ ಈ ರೀತಿಯ ನೀತಿಗಳಿಂದಾಗಿ ಪ್ರಜಾಪ್ರಭುತ್ವ ಉಳಿಯದೆ ಇರುವಂತಹ ಪರಿಸ್ಥಿತಿಯನ್ನು ತಂದೊಡ್ಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬ್ರಿಟಿಷರ ಕಾಲದಲ್ಲಿ ಜನರನ್ನು ಹತೋಟಿಗೆ ತರಲು ಮತ್ತು ಜನಪರ ಹೋರಾಟಗಳನ್ನು ತಡೆಯಲು ಈ ರೀತಿಯ ಕಾನೂನುಗಳನ್ನು ಬಳಸುತ್ತಿದ್ದರು.ಅದೇ ರೀತಿಯಲ್ಲಿಯೇ ರಾಜ್ಯ ಸರ್ಕಾರ ಆ ರೀತಿಯ ಕಾನೂನುಗಳನ್ನು ಬಳಸಲು ಹೊಂಚು ಹಾಕುತ್ತಿದೆ, ಸಂವಿಧಾನಕ್ಕೆ ಗೌರವ ನೀಡದೆ ದುರಾಡಳಿತ ನಡೆಸುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
