ಬಿಗ್ಬಾಸ್ ಮನೆಯಲ್ಲಿ ಟಾಸ್ಕ್, ಸಿಕ್ರೇಟ್ ಟಾಸ್ಕ್ ಎಂದು ಸ್ಪರ್ಧಿಗಳು ಕಚ್ಚಾಡುತ್ತಿದ್ದರೆ, ದೊಡ್ಮನೆಗೆ ರವಿಮಾಮನ ಎಂಟ್ರಿಯಾಗಿ ಹೊಸ ವಾತವರಣ ಸೃಷ್ಟಿಯಾಗಿದೆ.ಹಿಂದಿನ ಸಂಚಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಕಾಲೇಜಿನ ಲವ್ ಸ್ಟೋರಿ ಮನೆಯವ ಮುಂದೆ ಹೇಳಿಕೊಂಡು ಸ್ಪರ್ಧಿಗಳೆಲ್ಲಾ ಉಲ್ಲಾಸದಿಂದಿರುವಂತೆ ಮಾಡಿದ್ದಾರೆ.

ರವಿಚಂದ್ರನ್ ಜೊತೆ ಎಲ್ಲರೂ ಮಾತನಾಡುತ್ತಿರುವ ವೇಳೆ ಗಿಲ್ಲಿ ನಟ ತನ್ನ ಮೊದಲ ಕ್ರಷ್ ಬಗ್ಗೆ ಮಾತನಾಡಿದ್ದಾರೆ. ನಾನು ಕಾಲೇಜಿಗೆ ಹೋಗೊ ಟೈಮಿನಲ್ಲಿ ಒಂದು ಹುಡುಗಿನ ಮೇಲೆ ಕ್ರಷ್ ಆಗಿತ್ತು.ಆದ್ರೆ ಆ ಹುಡುಗಿ ನನ್ನನ್ನು ಅಣ್ಣಾ ಎಂದು ಕರೆಯುತ್ತಿದ್ದಳು.

ಅದಕ್ಕೆ ನಾನು ಅಣ್ಣಾ ಎಂದು ಕರೆಯಬಾರದು ಎಂದು ಬೇರೆಯವರ ಹತ್ತಿರ ವಾರ್ನಿಂಗ್ ಮಾಡಿಸಿದ್ದೆ.ಅವಳು ನನ್ನನ್ನು ಅಣ್ಣಾ ಎಂದು ಕರೆದರೆ ತುಂಬಾ ಬೇಜಾರ್ ಆಗುತ್ತದೆ ಎಂದಿದ್ದೆ.ಅದನ್ನು ಕೇಳಿದ ನನ್ನ ಹಿಂದಿನವ ನನ್ನ ಸ್ನೇಹಿತನಿನ್ನನ್ನು ಅಣ್ಣಾ ಎಂದು ಕರೆಯದೆ ಮಾವ ಎಂದು ಕರೀಬೇಕಾ ಎಂತ ಕೇಳಿದ. ಅದಕ್ಕೆ ಉತ್ತರಿಸಿದ ನಾನು ಕರೆಕ್ಟಾಗಿ ಹೇಳಿದ್ದೀಯಾ ಎಂದು ಸುಮ್ಮನೆ ಕುಳಿತುಕೊಂಡೆ.

ಅದಾದ ಮೇಲೆ 2 ವರ್ಷಗಳವರೆಗೂ ಆ ಹುಡುಗಿಯ ಹಿಂದೆ ಮುಂದೆ ಸುತ್ತಾಡುತ್ತಿದ್ದೇ. ಕಾಲೇಜಿಗೆ ಹೋಗುವಾಗ , ಬರುವಾಗ ಫಾಲೋ ಮಾಡುತ್ತಿದ್ದೆ. ಸುಮಾರು 2 ವರ್ಷ ನಂದು 1ವೇ ಲವ್ಸ್ಟೋರಿಮುಗಿದೋಗಿದೆ ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ರವಿಚಂದ್ರನ್ ನೀನು ಆ ಹುಡುಗಿಗೆ ಕೊನೆಯವರೆಗೂ ಹೇಳಲಿಲ್ಲವಾ, ಎಂದು ಕೇಳಿದ್ದಕ್ಕೆ ಆ ಹುಡುಗಿಗೂ ವಿಷಯ ಗೊತ್ತಿತ್ತು.2 ವರ್ಷ ಟ್ರೈ ಮಾಡಿದ್ದು ವ್ಯರ್ಥವಾಗಿ ನನ್ನ ಹಣೆಬರಹವೇ ಇಷ್ಟು? ಎಂದು ಬೆಂಗಳೂರಿಗೆ ವಾಪಸ್ ಬಂದೆ ಎಂದು ಗಿಲ್ಲಿ ನಟ ಹೇಳಿದ್ದಾರೆ.
