ಬೆಂಗಳೂರು: ರಸ್ತೆಯಲ್ಲಿ ಎದೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಸಹಾಯಕ್ಕೆ ಬರದ ಜನ ಮಾನವವೀಯತೆಯನ್ನು ಮರೆತಿರುವ ಘಟನೆ ನಡೆದಿದೆ.
ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬರು ಎದೆನೋವಿನಿಂದ ನರಳುತ್ತಿದ್ದರೂ ಯಾರೋಬ್ಬರು ಸಹಾಯಕ್ಕೆ ದಾವಿದಲಿಲ್ಲ. ಅವರ ಪತ್ನಿ ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಸಹಾಯದ ಅಸ್ತ ನೀಡಲೇಯಿಲ್ಲ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ರವಾನಿಸಲು ಆಗದ ಕಾರಣ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
34 ವರ್ಷದ ವೆಂಕಟರಮಣನ್ ಎಂಬುವವರು ಮೃತಪಟ್ಟ ದುರ್ದೈವಿ. ಇವರು ಡಿ.13ರ ಮುಂಜಾನೆ ಎದೆನೋವಿನಿಂದ ನರಳುತ್ತಿದ್ದರು.ಆ ಸಮಯದಲ್ಲಿ ಅಂಬುಲೆನ್ಸ್ ಲಬ್ಯವಿಲ್ಲದೆ ಪತ್ನಿ ರೂಪಾ ಪತಿಯನ್ನು ದ್ವಿಚಕ್ರ ವಾಹನದಲ್ಲಿ ಆಸ್ಪತೆಗೆ ಕರೆದೊಯ್ಯುವಾಗ ಮಾರ್ಗದ ಮಧ್ಯೆದಲ್ಲಿಯೇ ಅಪಘಾತವಾಗಿ ಇಬ್ಬರೂ ಕೆಳಗೆ ಬಿದ್ದು ಗಾಯಗೊಂಡ ಪತ್ನಿ ಸಹಾಯಕ್ಕಾಗಿ ರಸ್ತೆಯಲ್ಲಿ ಚಲಿಸುತ್ತಿರುವ ಗಾಡಿಯವರನ್ನು ಸಹಾಯಕ್ಕಾಗಿ ಅಂಗಲಾಚಿದರೂ ಯಾರೋಬ್ಬರೂ ಸಹಾಯ ಮಾಡಲು ಮುಂದೆ ಬರದಿರುವುದನ್ನು ವೀಡಿಯೋ ತುಣುಕಿನಲ್ಲಿ ಕಾಣಬಹುದು.
