ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಹಲವು ಬದಲಾವಣೆಗಳು ನಡೆಯುತ್ತಿದ್ದು, ಕುರ್ಚಿಗಾಗಿ ಕದನವೇ ನಡೆಯುತ್ತಿದೆ. ಇದರ ನಡುವೆ ಬ್ರೇಕ್‌ಪಾಸ್ಟ್ ಮೀಡಿಂಗ್ ಮಾಡಿ ಗೊಂದಲಗಳಿಗೆ ಬ್ರೇಕ್ ಹಾಕಿದ್ದಾರೆ. ಮತ್ತೊಂದು ಕಡೆ ಯತೀಂದ್ರ ಸಿದ್ದರಾಮಯ್ಯನವರು ನನ್ನ ತಂದೆಯೇ 5 ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿಕೆಗಳನ್ನು ನೀಡಿ ಎಲ್ಲರಲ್ಲೂ ಕುತೂಹಲ ಮೂಡಿಸುತ್ತಿದ್ದಾರೆ.
ಇದೀಗ ಬಿಜೆಪಿ ಪಕ್ಷದಿಂದ ಉಚ್ಚಾಟಿಗೊಂದ ಬಸವನಗೌಡ ಯತ್ನಾಳ್ ನನ್ನನ್ನ ಸಿಎಂ ಮಾಡ್ತೀನಿ ಎಂದರೆ ಬಿಜೆಪಿ ಪಕ್ಷಕ್ಕೆ ಮತ್ತೆ ವಾಪಸ್ ಹೋಗ್ತಿನಿ, ಮತ್ತೆ ಪಕ್ಷಕ್ಕೆ ವಾಪಸ್ ಬನ್ನಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ನನ್ನನ್ನು ಕರೆದಿದ್ದಾರೆ.ಅಮಿತ್ ಶಾರವರ ಬಳಿಗೆ ಹೋಗುವ ವಿಚಾರದ ಬಗ್ಗೆ ಹೇಳಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
