ಕನ್ನಡ ಚಿತ್ರರಂಗದಲ್ಲಿ ತನ್ನದೇ ಶೈಲಿಯಲ್ಲಿ ನಟಿಸಿ ಸೈ ಎನಿಸಿಕೊಂಡು ಬಾಕ್ಸ್ ಆಫೀಸ್ ಸುಲ್ತಾನ್ ಎಂಬ ಪಟ್ಟವನ್ನು ಪಡೆದುಕೊಂಡಿರುವ ದರ್ಶನ್ ನಟನೆಯ ಡೆವಿಲ್ ಸಿನಿಮಾ ರಿಲೀಸ್ ಆಗಿದೆ.ಕನ್ನಡದ ನಟರು ನಟಿಸಿರುವ ಚಲನಚಿತ್ರಗಳು ಗೆಲ್ಲಬೇಕೆಂದು ತನ್ನ ನೆಚ್ಚಿನ ನಟನ ಚಿತ್ರದ ಪ್ರಚಾರವನ್ನು ಅಭಿಮಾನಿಗಳು ಅದ್ದೂರಿಯಾಗಿ ಮಾಡುತ್ತಾರೆ.ಹಾಗೆಯೇ ಚಿತ್ರಗೆಲ್ಲುವುದು ಆ ನಟನಿಗೆ ಅವಶ್ಯವಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ದರ್ಶನ್ ನಟನೆಯ ಸಿನಿಮಾ ಇಂದು ತೆರೆಕಾಣಲಿದೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರೂ ಕೂಡಾ ನಟ ದರ್ಶನ್ ಸೂಟಿಂಗ್ ಮುಗಿಸಿಕೊಟ್ಟಿದ್ದರು.ಬೆನ್ನುಯ ನೋವಿದ್ದರೂ ಕೂಡಾ ಅದನ್ನು ಲೆಕ್ಕಿಸದೆ ತನ್ನನ್ನು ನಂಬಿಕೊಂಡಿರುವ ನಿರ್ದೇಶಕ, ಮತ್ತು ನಿರ್ಮಾಪಕರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ಬಾಕ್ಸ್‌ಆಫೀಸ್ ಸುಲ್ತಾನ್ ಎಂದು ಖ್ಯಾತಿ ಪಡೆದಿರುವ ದರ್ಶನ್ ನಟನೆಯ ಡೆವಿಲ್ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಪಡೆಯುತ್ತಿದ್ದು, ಆಡ್ವಾನ್ಸ್ ಬುಕಿಂಗ್ ಮೂಲಕ ಹೌಸ್ ಪುಲ್ ಆಗಿದೆ.ಬಾರೀ ಹೆಚ್ಚಿನ ಅಭಿಮಾನಿ ಬಳಗವನ್ನು ಪಡೆದುಕೊಂಡಿರುವ ದರ್ಶನ್‌ರವರ ಸಿನಿಮಾ ಒಂದೇ ವಾರದಲ್ಲಿ ಹಾಕಿರುವ ಬಂಡವಾಳವನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ತಮ್ಮ ಅರಾಧ್ಯ ದೈವ ನಟನೆಯ ಸಿನಿಮಾವನ್ನು ಅಭಿಮಾನಿಗಳು ಯಾವ ಮಟ್ಟಿಗೆ ಯಶಸ್ವಿಗೊಳಿಸುತ್ತಾರೆ ಎಂಬುದನ್ನು ಕಾದುನೋಡೋಣ.
