ನವದೆಹಲಿ: ದೆಹಲಿಯಲ್ಲಿ ನಡೆದಿರುವಂತಹ ಕಾರು ಸ್ಪೋಟದ  ತನಿಖೆಗೆ ವಿಶೇಷವಾದ ತಂಡವನ್ನು ರಚಿಸಲಾಗಿದ್ದು, ಸುಮಾರು 500ಕ್ಕೂ ಹೆಚ್ಚಿನ ಪೊಲೀಸರ ತಂಡ ತನಿಖೆಯನ್ನು ನಡೆಸಲಿದೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ನಡೆದಿರುವಂತಹ ಸ್ಪೋಟದ ಕುರಿತು ಗೃಹಸಚಿವರಾದ ಅಮಿತ್‌ ಶಾರವರ ನಿವಾಸದಲ್ಲಿ ಉನ್ನತಮಟ್ಟದ ಭದ್ರತಾ ಸಭೆಯನ್ನು ನಡೆಸಿದ್ದಾರೆ. ಆ ಸಭೆಯಲ್ಲಿ ಗುಪ್ತಚರಬ್ಯೂರೋ ಮುಖ್ಯಸ್ಥ, ರಾಷ್ಟ್ರೀಯ ತನಿಖಾ ಸಂಸ್ಥೆ, ಮಹಾನಿರ್ದೇಶಕರು, ದೆಹಲಿ ಪೊಲೀಸ್‌ ಆಯುಕ್ತರು, ಜಮ್ಮು ಮತ್ತು ಕಾಶ್ಮೀರಾದ ಡಿಜಿಪಿ ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ದೇಶದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯನ್ನು ನಾಳೆ ಸಂಜೆ 5.30ರ ಸುಮಾರಿಗೆ ಸಭೆ ನಡೆಯಲಿದೆ .

Leave a Reply

Your email address will not be published. Required fields are marked *