ಬೆಂಗಳೂರು: ಅನರ್ಹ ಬಿಪಿಎಲ್ ಕಾರ್ಡುಗಳನ್ನು ಕ್ಯಾನ್ಸಲ್ ಮಾಡಲ್ಲ. ಎಲ್ಲಾ ಕಾರ್ಡುಗಳನ್ನು ಘಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ, ಬಿಪಿಎಲ್ ಕಾರ್ಡ್ ಪರಿಷ್ಕರಣೆಯ ಪ್ರಕಾರ ಕಾರ್ಡುಗಳನ್ನು ಎಪಿಎಲ್ ಕಾರ್ಡುಗಳಿಗೆ ವರ್ಗಾವಣೆ ಮಾಡುತ್ತೇವೆ. ಯಾವ ಅನರ್ಹ ಕಾರ್ಡುಗಳನ್ನು ಕ್ಯಾನ್ಸಲ್ ಮಾಡುವುದಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿರುವ ಎಲ್ಲಾ ಕಾರ್ಡುಗಳನ್ನು ಪರಿಶೀಲಿಸಿ ಏನಾದ್ರೂ ಲೋಪಗಳಾಗಿದ್ದರೆ 24 ಗಂಟೆಯ ಸಮಯದೊಳಗೆ ಸರಿಪಡಿಸಿ ಆಹಾರ ಧಾನ್ಯಗಳನ್ನು ನೀಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
