ಮೈಸೂರು: ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಚರ್ಚೆಯಲ್ಲಿರುವ ಬಸನಗೌಡ ಪಾಟೀಲ್ ಮತ್ತೆ ಅದೇ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಹೌದು, 2028ಕ್ಕೆ ನಾನು ಸಿಎಂ ಆಗುತ್ತೇನೆ ಎಂದು ಶಾಸಕ ಯತ್ನಾಳ್ ಅಚ್ಚರಿಯ ಹೇಳಿಕೆ ನೀಡಿ ಎಲ್ಲೆಲ್ಲಿಯೂ ಚರ್ಚೆಗೆ ಗ್ರಾಸವಾಗಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಿಯಾದ ಮಾರ್ಗದಲ್ಲಿ ಅಧಿಕಾರ ನಡೆಸಿದರೆ ನಾನು ಬಿಜೆಪಿಲ್ಲಿರುತ್ತೇನೆ, ಅದು ರಿಪೇರಿಯಾಗದಿದ್ದರೆ ನನ್ನದೇ ಹೊಸ ಪಕ್ಷ ಕಟ್ಟಿ ಎಲೆಕ್ಷನ್ನಲ್ಲಿ ಸ್ಪರ್ಧಿಸಿ ನಾನೇ ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ.
ಎಲ್ಲಾ ಪಕ್ಷಗಳು ಹೊಂದಾಣಿಕೆಯ ರಾಜಕೀಯವನ್ನು ಮಾಡುತ್ತಿದ್ದಾರೆ.ಕೆಲವು ಬಿಜೆಪಿಯ ನಾಯಕರು ಕಾಂಗ್ರೆಸ್ ಪಕ್ಷದ ಸಂಪರ್ಕದಲ್ಲಿದ್ದಾರೆ. ಭ್ರಷ್ಟಚಾರ ಇಲ್ಲದೇ ಇರುವ ರಾಜಕಾರಣ ಮತ್ತು ಕುಟುಂಬ ರಾಜಕಾರಣ ಮುಕ್ತ ಆಡಳಿತ ನಡೆಸುವ ಗುರಿಯನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.
