ಬೆಂಗಳೂರು: ದಸರಾ ಉದ್ಘಾಟನೆಯಿಂದ ಬಾನು ಮುಷ್ತಾಕ್ ಹಿಂದೆ ಹೋಗಬೇಕೆಂದು ಬಿಜೆಪಿ ಆಗ್ರಹ ಮಾಡಿದೆ.
ಈ ವಿಚಾರದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿಯು ʼದಸರಾ ಹಬ್ಬದ ಉದ್ಘಾಟನೆಗೆ ಬಾನು ಮುಷ್ತಾಕ್ರನ್ನು ಆಯ್ಕೆ ಮಾಡಿರುವುದಕ್ಕೆ ಕನ್ನಡಪರ ಸಂಘಟನೆಗಳಿಂದಿಡಿದು ಎಲ್ಲಾ ಕಡೆಗಳಿಂದಲೂ ವಿರೋಧ ಬರುತ್ತಿವೆ. ಸಿಎಂ ಸಿದ್ದರಾಮಯ್ಯನವರು ನಾಡಿನ ಜನತೆಯ ಭಾವನೆಗಳಿಗೆ ಬೆಲೆ ನೀಡುತ್ತಿಲ್ಲ ಎಂದಿದ್ದಾರೆ.
ಮತ್ತೊಬ್ಬ ಬೂಕರ್ ಅವಾರ್ಡ್ ವಿಜೇತೆ ದೀಪಾ ಬಸ್ತಿಯವರನ್ನು ಆಹ್ವಾನಿಸದೆ ಕೇವಲ ಬಾನು ಮುಷ್ತಾಕ್ರನ್ನು ಆಹ್ವಾನ ಮಾಡಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
