ಬೆಂಗಳೂರು: ಇವಿಎಂ ಮೆಷಿನ್‌ ಬದಲು ಬ್ಯಾಲೆಟ್‌ ಪೇಪರ್‌ ಬಳಸಿ ಚುನಾವಣೆ ನಡೆಸುವ ನಿರ್ಧಾರವನ್ನು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಬಿಜೆಪಿ ಪಕ್ಷ ವಿರೋಧ ಮಾಡುತ್ತಿರುವುದೇಕೆ? ಎಂದು ಡಿಕೆ ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಮತಪತ್ರಗಳನ್ನು ಬಳಕೆ ಮಾಡುವುದಕ್ಕೆ ಬಿಜೆಪಿ ವಿರೋಧಿಸುತ್ತಿದೆ. ಇದು ಸರ್ಕಾರದ ತೀರ್ಮಾನ ಇದನ್ನು ವಿರೋಧ ಮಾಡುತ್ತಿರುವುದೇಕೆ? ಬಿಜೆಪಿಗೆ ಭಯವೇ ಎಂದು ಪ್ರಶ್ನಿಸಿದ್ದಾರೆ.

ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸುವ ಅವಕಾಶ ಸರ್ಕಾರಕ್ಕೆ ಇದೆ. ಬಿಜೆಪಿಗರ ಅಧಿಕಾರವಿದ್ದಾಗ ಅವರು ಮಾಡಿರುವ ಕಾನೂನು ತಿಳಿದಿದೆ. ಮುಂಬರುವ ಚುನಾವಣೆಣೆಯಲ್ಲಿ ಮತಪತ್ರಗಳನ್ನು ಬಳಸುವ ತೀರ್ಮಾನ ಮಾಡಿದ್ದೇವೆ. ಇವರಿಗ್ಯಾಕೆ ಕಳ್ಳನ ಮನಸ್ಸು ಹುಳ್ಳುಳ್ಳಗೆ ಎನ್ನುವಂತೆ ಯಾಕೆ ಆಡುತ್ತೀರಿ.ಚುನಾವಣಾ ಆಯೋಗದ ನಿರ್ಧಾರದಂತೆ ಲೋಕಸಭೆಮತ್ತು ರಾಜ್ಯಸಭೆ ಚುನಾವಣೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *