ಚಿತ್ರದುರ್ಗ: ಚಿತ್ರದುರ್ಗದ ಕಾಂಗ್ರೆಸ್ ನಾಯಕ ವಿರೇಂದ್ರ ಪಪ್ಪಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಟ್ಟಿಂಗ್ ಹಗರಣದಲ್ಲಿ ವಿರೇಂದ್ರ ಪಪ್ಪಿ ಮತ್ತು ಸಹೋದರನ ಮನೆಯ ಮೇಲೆ ಇಡಿ ದಾಳಿ ಮಾಡಿದೆ.ಆ ದಾಳಿಯಲ್ಲಿ ಹೆಚ್ಚು ಪ್ರಮಾಣದ ವಿದೇಶಿ ಕರೆನ್ಸಿ, ಚಿನ್ನಾಭರಣ, ಮತ್ತು ಹಣವನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವಿರೇಂದ್ರ ಪಪ್ಪಿಯ 1ಕೋಟಿ ವಿದೇಶಿ ಕರೆನ್ಸಿ ಸೇರಿದಂತೆ 12ಕೋಟಿ ಹಣವನ್ನು ಇಡಿಯು ಜಪ್ತಿ ಮಾಡಿದೆ. ಇದೇ ವೇಳೆ 6ಕೋಟಿ ರೂ ಬೆಲೆಬಾಳುವ ಚಿನ್ನ, ಸುಮಾರು 10 ಕಿಲೋ ಬೆಳ್ಳಿ, ಮತ್ತು 4 ವಾಹನಗಳನ್ನು ಜಪ್ತಿ ಮಾಡಿದ್ದಾರೆ .
ವೀರೇಂದ್ರ ಪಪ್ಪಿಯ ಮನೆ, ಆಫೀಸ್, ಸೇರಿದಂತೆ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.
