ಮಂಗಳೂರು: ತಮಿಳುನಾಡಿನಲ್ಲಿರುವ ನನ್ನನ್ನು ದುಡ್ಡಿನ ಆಸೆ ತೋರಿಸಿ ಕರೆತಂದಿದೆ ಆಗುಂಪು ಎಂದು ಮಾಸ್ಕ್‌ಮ್ಯಾನ್‌ ಹೇಳಿದ್ದಾನೆ.

Sit ವಿಚಾರಣೆಯ ಸಂದರ್ಭದಲ್ಲಿ ಹಲವು ವಿಚಾರಗಳನ್ನು ಮಾಸ್ಕ್‌ ಮ್ಯಾನ್‌ ಬಾಯಿಬಿಟ್ಟಿದ್ದಾನೆ. ತಮಿಳುನಾಡಿನಲ್ಲಿದ್ದ ನನ್ನನ್ನು ಧರ್ಮಸ್ಥಳ ವಿರೋಧಿ ಗ್ಯಾಂಗ್‌ ನನ್ನನ್ನು ಭೇಟಿ ಮಾಡಿದ್ದು, ನಾವು ಹೇಳಿದ ಹಾಗೆ ಮಾಡಿದರೆ ನಿನಗೆ ಅಗತ್ಯವಿರುವಷ್ಟು ಹಣ ಸಿಗುತ್ತದೆ. ಪ್ರಕರಣದಲ್ಲಿ ನೀನೇ ನಾಯಕ, ನಿನ್ನಿಂದಲೇ ಪ್ರಕರಣ ಹಲವು ತಿರುವು ಪಡೆದುಕೊಳ್ಳುತ್ತದೆ. ನೀನು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ತನಿಖೆಯ ನಂತರ ಹಲವಾರು ದೂರುದಾರರು ಬರ್ತಾರೆ. ಬೆಂಗಳೂರಿಗೆ ಬಂದ ನಂತರ ನನಗೆ ತರಬೇತಿಯನ್ನು ನೀಡಲಾಗಿತ್ತು.ಯಾವ ಪ್ರಶ್ನೆಗೆ ಯಾವ ಉತ್ತರ ನೀಡಬೇಕೆಂದು ತಿಳಿಸಿದ್ದರು. ಗುಂಪು ಹೇಳಿಕೊಟ್ಟಂತೆ ನಾನು ಮಾತನಾಡಿದ್ದೇನೆ ಎಂದು ಹೇಳಿದ್ದಾನೆ.

ಸುಜಾತಾಭಟ್‌ ಕಂಪ್ಲೆಂಟ್‌ ಕೊಡುವ ಮೊದಲು ನನಗೆ ಭಯವಿತ್ತು.ನಂತರ ನನಗೆ ಧೈರ್ಯ ಬಂತು. ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿರುವ ಗುಂಪಿನಿಂದ ನಾನು 2 ಲಕ್ಷ ರೂಗಳನ್ನು ಪಡೆದಿದ್ದೇನೆ ಎಂದು ಮಾಸ್ಕ್‌ಮ್ಯಾನ್‌ ಬಾಯಿಬಿಟ್ಟಿದ್ದಾನೆ.

Leave a Reply

Your email address will not be published. Required fields are marked *