ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ಡಿಕೆಶಿವಕುಮಾರ್ RSS ಹಾಡನ್ನು ಹಾಡಿರುವುದಕ್ಕೆ ಕಾಂಗ್ರೆಸ್ಸಿನ ನಾಯಕರು ಹುಬ್ಬೇರಿಸಿಬಾಯ ಮೇಲೆ ಕೈಯಿಟ್ಟುಕೊಂಡಿದ್ದಾರೆ.
ಕಲಾಪ ಮುಗಿದ ನಂತರ ವಿಧಾನಸೌಧದಲ್ಲಿ ಮಾತನಮಾಡಿದ ಡಿಕೆಶಿ, ಹಾಡನ್ನು ಹಾಡಿರುವುದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ.ನಾನು ಎಲ್ಲಾ ಸಂಘ ಸಂಸ್ಥೆಗಳ ಬಗ್ಗೆಯೂ ತಿಳಿದುಕೊಂಡಿದ್ದೇನೆ. ಹಾಗೆಯೇ RSS ಸಂಘದ ಬಗ್ಗೆಯೂ ರಿಸರ್ಚ್ ಮಾಡುತ್ತಿರುತ್ತೇನೆ, ಕಮ್ಯೂನಿಷ್ಟ್ ಬಗ್ಗೆಯೂ ಸಂಶೋಧನೆಯನ್ನು ಮಾಡಿದ್ದೇನೆ, ಆರ್ ಎಸ್ ಎಸ್ , ಬಿಜೆಪಿ, ಮತ್ತು ಜನತಾ ಧಳದ ಬಗ್ಗೆಯೂ ರಿಸರ್ಚ್ ಮಾಡುತ್ತೀರುತ್ತೇನೆ ಎಲ್ಲಾ ಸಂಘಟನೆಗಳಲ್ಲಿಯೂ ಒಂದೊಂದು ವಿಶಿಷ್ಟ ಗುಣಗಳಿರುತ್ತವೆ ಎಂದು ಹೇಳುವುದರ ಮೂಲಕ RSS ಹಾಡನ್ನು ಹಾಡಿರುವುದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ.
