ಬೆಂಗಳೂರು: ಧರ್ಮಸ್ಥಳ ಪ್ರಕರಣದ ಕುರಿತು ಇದೇ ಮೊದಲನೆ ಬಾರಿಗೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿರುವುದು ಕೇಳಿಬಂದಿದೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ , ಧರ್ಮಸ್ಥಳ ಪ್ರಕರಣದ ಕುರಿತು ತನಿಖೆ ಮಾಡಲು ವೀರೇಂದ್ರ ಹೆಗ್ಗಡೆಯವರೇ ಒಪ್ಪಿದ್ದಾರೆ. ಎಸ್,ಐ.ಟಿ.ರಚನೆ ಮಾಡಿದಾಗಲೂ ಕೂಡಾ ಬಿಜೆಪಿಯವರು ಮಾತನಾಡಲಿಲ್ಲ.ಇದೀಗ 15 ಜಾಗದಲ್ಲಿ ಭೂಮಿಯನ್ನು ಅಗೆದು ಅಸ್ಥಿಪಂಜರ ಹುಡುಕಿದಾಗ ಎರಡು ಕಡೆ ಮಾತ್ರ ಪತ್ತೆಯಾಗಿತ್ತು, ಇನ್ನು 13 ಕಡೆ ಸಿಗದಿದ್ದಾಗ ಮಾತನಾಡಲು ಶುರುಮಾಡಿದ್ದಾರೆ ಎಂದು ಬಿಜೆಪಿಗರನ್ನು ಟೀಕಿಸಿದ್ದಾರೆ.
