ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವಿಧಾನಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮಾತನಾಡುವಾಗ ಆರ್ ಎಸ್ ಎಸ್ ಗೀತೆಯನ್ನು ಹಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಗುರುವಾರ ವಿದಾನಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ʼನಮಸ್ತೆ ಸದಾ ವತ್ಸಲೇ ಮಾತೃಭೂಮಿʼ ಎಂಬ ಆರ್ ಎಸ್ ಎಸ್ ಗೀತೆಯನ್ನು ಹಾಡಿರುವ ವೀಡಿಯೋ ವೈರಲ್ ಆಗಿದೆ.
ವಿಧಾನಸಭೆಯಲ್ಲಿ ಆರ್.ಸಿ.ಬಿ. ಕಪ್ ಗೆದ್ದಾಗ ಚಿನ್ನಸ್ವಾಮಿ ಕ್ರಿಡಾಂಗಣದ ಕಾಲ್ತುಳಿತದ ವಿಚಾರ ಚರ್ಚೆ ನಡೆಯುವ ವೇಳೆ ಗೃಹಸಚಿವರು ಉತ್ತರ ನೀಡಿದ್ದಾರೆ.ಇದೇ ಸಮಯದಲ್ಲಿ ವಿಪಕ್ಷ ನಾಯಕ ಆಶೋಕ್ ಕೂಡಾ ಆ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಕೂಡಾ ಹಾಜರಾಗಿದ್ದರು ಎನ್ನುವ ಹೇಳಿಕೆಗೆ ಉತ್ತರಿಸಲು ಎದ್ದು ನಿಂತ ಡಿಕೆಶಿ ನಾನು ಕ್ರಿಕೆಟ್ ಅಭಿಮಾನಿ, ನಾನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿದ್ದೆ, ಆರ್.ಸಿ.ಬಿ. ಕಪ್ಗೆ ಮುತ್ತು ಕೊಟ್ಟಿದ್ದೆ ಎಂದಿದ್ದಾರೆ.ಅದೇ ವೇಳೆ ಆಶೋಕ್ ಆರ್.ಎಸ್.ಎಸ್ ಚಡ್ಡಿಯನ್ನು ಹಾಕಿದ್ರಿ ಎಂದು ಕಾಲೆಳೆದಾಗ ಇದಕ್ಕೆ ʼ ʼನಮಸ್ತೆ ಸದಾ ವತ್ಸಲೇ ಮಾತೃಭೂಮಿʼಎಂದು ತಿರುಗೇಟನ್ನು ನೀಡಿದ್ದಾರೆ.
