ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಸ್ಪೋಟಕ ಹೇಳಿಕೆಯೊಂದನ್ನು ನೀಡುವುದರ ಮೂಲಕ ರಾಜ್ಯದಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾನೆ .
ಧರ್ಮಸ್ಥಳ ಪ್ರಕರಣದ ಅನಾಮಿಕ ದೂರುದಾರ ಎಸ್.ಐ.ಟಿ ಅಧಿಕಾರಿಗಳ ಎದುರು ಸ್ಪೋಟಕ ಹೇಳಿಕೆಯೊಂದನ್ನು ಹೇಳುವುದರ ಮೂಲಕ ಇಡೀ ರಾಜ್ಯದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದ್ದಾನೆ. ನಾನು ಒತ್ತಡಕ್ಕೆ ಒಳಗಾಗಿ ಈ ರೀತಿಯ ಹೇಳಿಕೆಯನ್ನು ನೀಡಿದ್ದೇನೆ ಎಂದು ಎಸ್.ಐ.ಟಿ ಅಧಿಕಾರಿಗಳ ಮುಂದೆ ಸತ್ಯ ಹೇಳಿದ್ದಾನೆ. ನನಗೆ 3 ಜನ ಪೊಲೀಸರು ಏನು ಹೇಳಿಕೆ ನೀಡಬೇಕೆಂದು ಹೇಳಿಕೊಟ್ಟಿದ್ದರು. ಅವರ ಒತ್ತಾಯದಿಂದ ನಾನು ಆ ರೀತಿ ಹೇಳಿದೆ ಎಂದು ಬಾಯಿಬಿಟ್ಟಿದ್ದಾನೆ.
ನಾನು 2014ರಿಂದ ಧರ್ಮಸ್ಥಳದಿಂದ ಹೋಗಿ ತಮಿಳುನಾಡಿನಲ್ಲಿ ವಾಸವಾಗಿದ್ದೆ. 2023ರಲ್ಲಿ ನನ್ನನ್ನು ಒಂದು ಗುಂಪು ಭೇಟಿ ಮಾಡಿ ನನ್ನನ್ನು ತಮಿಳುನಾಡಿನಿಂದ ಕರೆತಂದಿದ್ದರು. ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಬಗ್ಗೆ ವಿಚಾರಿಸಿದಾಗ ನಾನು ಲೀಗಲ್ ಆಗಿ ಶವಗಳನ್ನು ಮಣ್ಣು ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದೆ, ಆದರೆ ಅವರು ನನಗೆ ತಪ್ಪು ಹೇಳಿಕೆ ನೀಡುವಂತೆ ಒತ್ತಾಯಿಸಿ ಬುರುಡೆ ಕೊಟ್ಟು ಪೊಲೀಸರಿಗೆ ಸೆರೆಂಡರಾಗಲು ಹೇಳಿದ್ದರು.ಸುಜಾತಾ ಭಟ್ ಕಂಪ್ಲೇಂಟ್ ಕೊಡುವ ತನಕ ನನಗೆ ಆತಂಕವಿತ್ತು.ಅದಾದ ನಂತರ ನನಗೆ ಧೈರ್ಯ ಬಂತು ಎಂದು ಹೇಳಿದ್ದಾನೆ. ನನ್ನನ್ನು ಸಂಪರ್ಕಿಸಿದ ಗುಂಪು ಬುರುಡೆ ನೀಡಿ ಶರಣಾಗುವಂತೆ ಹೇಳಿದ್ದರಿಂದ ನಾನು ಆ ಹೇಳಿಕೆಯನ್ನು ನೀಡಿದ್ದೇನೆಂದು ಎಸ್.ಐ.ಟಿ ಅಧಿಕಾರಿಗಳ ಮುಂದೆ ಸ್ಪೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾನೆ.
