ನವದೆಹಲಿ: ಆಗಸ್ಟ್ 17ರಿಂದ ಪ್ರಾರಂಭವಾಗುವ ʼಮತದಾರ ಅಧಿಕಾರ ಯಾತ್ರೆʼಯು ಬಿಹಾರದಿಂದಲೇ ಆರಂಭವಾಗುತ್ತದೆ.ಅಲ್ಲಿಂದಲೇ ಮತಗಳ್ಳತನ ವಿರುದ್ಧ ನೇರ ಹೋರಾಟಕ್ಕೆ ಇಳಿಯುತ್ತೇನೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ.
ಇದು ಕೇವಲ ಚುನಾವಣೆಯ ವಿಷಯದಲ್ಲಿ ಅಲ್ಲ. ಸಂವಿಧಾನವು ʼಒಬ್ಬ ವ್ಯಕ್ತಿ ಒಂದು ವೋಟ್ʼ ಹಕ್ಕನ್ನು ರಕ್ಷಿಸಲು ನಡೆಯುತ್ತಿರುವ ಹೋರಾಟ. ದೇಶದಾದ್ಯಂತ ಮತದಾರರ ಪಟ್ಟಿಯ ಶುದ್ದೀಕರಣ ಮಾಡುವುದೇ ಅಭಿಯಾನದ ಗುರಿ.ಎಲ್ಲಾ ಯುವಕರು, ಕಾರ್ಮಿ೯ಕರು, ಸಾರ್ವಜನಿಕರು, ಪ್ರತಿಯೊಬ್ಬ ನಾಗರೀಕರು ಈ ಹೋರಾಟಕ್ಕೆ ಕೈ ಜೋಡಿಸಬೇಕು. ಬಿಹಾರದ ಮಣ್ಣಿನಿಂದಲೇ ಆರಂಭವಾಗುವ ಯಾತ್ರೆ ಸೆಪ್ಟೆಂಬರ್ 1ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯುವ ಮಹಾ ರ್ಯಾಲಿಯೊಂದಿಗೆ ಕೊನೆಗೊಳ್ಳುತ್ತದೆ. ʼಈ ಸಲ ಮತಗಳ್ಳರಿಗೆ ಸೋಲುಂಟಾಗುತ್ತದೆ. ಜನರು ಮತ್ತು ಸಂವಿಧಾನದ ಗೆಲುವು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
