ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತಹ ಎ2 ಆರೋಪಿಯಾಗಿರುವ ನಟ ದರ್ಶನ್‌ಗೆ ಮಂಜೂರಾಗಿರುವ ಮಧ್ಯಂತರ ಬೇಲ್‌ಗೆ ತಡೆಯನ್ನು ಕೋರಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವಲ್ಲಿ ವಿಳಂಬವಾಗಿಲ್ಲವೆಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ .
ಈ ವಿಚಾರದ ಕುರಿತು ಮಾತನಾಡಿದ ಅವರು, ಮೇಲ್ಮನವಿಯನ್ನು ಯಾವಾಗ ಸಲ್ಲಿಸಬೇಕು ಎಂಬ ವಿಷಯವನ್ನು ಗೃಹಿಲಾಖೆ ಕಾರ್ಯದರ್ಶಿಗಳು ನಿರ್ಧರಿಸುತ್ತಾರೆ. ಮೇಲ್ಮನವಿಯನ್ನು ಸಲ್ಲಿಸಲು ಇಚ್ಚಿಸಿದರೆ ಸಲ್ಲಿಸಿ ಎಂದು ನಾನು ಸೂಚನೆ ನೀಡಿದ್ದೇನೆ.ಈ ರೀತಿಯ ಪ್ರಕರಣಗಳನ್ನು ಸರಿಯಾದ ಕ್ರಮಗಳನ್ನು ಅನುಸರಿಸಿ ಮುಂದುವರೆಯಬೇಕಾಗುತ್ತದೆ.ಮೇಲ್ಮನವಿ ಸಲ್ಲಿಕೆಯ ವಿಚಾರವು ಪೊಲೀಸ್ ಇಲಾಖೆಯಿಂದಲೂ ಪ್ರಸ್ಥಾವನೆ ಬರಬೇಕು. ಕಾನೂನು ಇಲಾಖೆಯಿಂದಲೂ ಮಾಹಿತಿಯನ್ನು ಪಡೆದುಕೊಳ್ಳಬೇಕು.ನಂತರ ಸರ್ಕಾರ ತೀರ್ಮಾನ ಮಾಡುತ್ತದೆ ಎಂದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್‌ಗೆ ಬೆನ್ನು ನೋವಿನ ಚಿಕಿತ್ಸೆಗಾಗಿ 6 ವಾರಗಳ ಕಾಲ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿತ್ತು.