ಬೆಂಗಳೂರು: ವಕ್ಫ್‌ ವಿಚಾರವನ್ನಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ.ವಕ್ಫ್‌ ಹೆಸರನ್ನಿಟ್ಟುಕೊಂಡು ಕಾಂಗ್ರೆಸ್‌ ರೈತರ ಭೂಮಿಯನ್ನು ಕಸಿದುಕೊಳ್ಳುತ್ತಿದೆ ಎಂದು ಬಿಜೆಪಿ ಹಿಂದಿನಿಂದಲೂ ಪ್ರತಿಭಟನೆ ಮಾಡುತ್ತಿದೆ ಎಂದು ಡಿಸಿಎಂ ಡಿಕೆಶಿವಕುಮಾರ್‌ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿಯನ್ನು ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಬಿಜೆಪಿ ಪಕ್ಷವೂ ಕಾಂಗ್ರೆಸ್‌ ವಿರುದ್ದ ಮಾಡುತ್ತಿರುವುದು ಪ್ರತಿಭಟನೆಯಲ್ಲ, ರಾಜಕಾರಣ. ರಾಜಕೀಯದ ಲಾಭಕ್ಕಾಗಿ ಪ್ರತಿಭಟನೆಯ ನಾಟಕ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನವೆಂಬರ್‌ 13 ರಂದು ನಡೆಯಲಿರುವ ಚನ್ನಪಟ್ಟಣ ಚುನಾವಣೆಯ ಕಣ ರಂಗೇರುತ್ತಿದೆ ಎಂದು ಮಾಧ್ಯಮದವರ ಮಾತಿಗೆ ಉತ್ತರಿಸಿದ ಡಿಸಿಎಂ, ಯಾವ ರಣನೂ, ಇಲ್ಲ. ಯಾವ ರಂಗನೂ ಇಲ್ಲ. ರಾಜಕೀಯದಲ್ಲಿ ರಣರಂಗವಾಡಿದವರೆಲ್ಲಾ ಎಲ್ಲೆಲ್ಲಿ ಹೋಗಿದ್ದಾರೋ? ಮೊದಲು ಜನತೆಯ ಮನಸ್ಸನ್ನು ಗೆಲ್ಲಬೇಕು. ನಾವು ಮಾಡುವ ಅಭಿವೃದ್ದಿಯಾಗಲೀ ಕೆಲಸಗಳಿಂದಾ ಜನರು ನಮ್ಮನ್ನು ಗಣನೆಗೆ ತೆಗೆದುಕೊಳ್ತಾರೆ.  ಯಾವ ನಾಯಕ ಏನು ಕೊಟ್ಟಿದ್ದಾರೆ ಉದಾಹರಣೆಗೆ ಡಿಕೆಶಿವಕುಮಾರ್‌ ಜನರಿಗೆ ಯಾವ ಕೊಡುಗೆ ನೀಡಿದ್ದಾರೆ? ಹೆಚ್.ಡಿ.ಕೆ. ಏನು ಕೊಟ್ಟಿದ್ದಾರೆ. ಯೋಗಿ ಏನು ಕೊಟ್ಟಿದ್ದಾರೆ ಎಂಬುದಷ್ಟೇ ಮುಖ್ಯವಾಗಿರುತ್ತದೆ.ನಾವೇನು ಜನಗಳಿಗೆ ಒಳ್ಳೆಯ ಕೆಲಸಗಳನ್ನು ಮಾಡಿರುತ್ತೇವೆ ಎನ್ನುವುದರ ಮೇಲೆ ಅವರು, ನಮಗೆ ಅಂಕಗಳನ್ನು ನೀಡ್ತಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *