ಬೆಂಗಳೂರು: ರೈತರಿಗೆ ವಕ್ಫ್‌ ನೋಟಿಸ್‌ ನೀಡಿರುವುದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿಯವರು ಊಸರವಳ್ಳಿಗಿಂತ ಬೇಗ ಬಣ್ಣವನ್ನು ಬದಲಿಸುತ್ತಾರೆ ಎಂದು  ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

“ವಕ್ಫ್‌ ಭೂಮಿ ಅಲ್ಲಾನಿಗೆ ಸೇರಿದ್ದು, ಅದನ್ನು ಮರಳಿ ಪಡೆಯುವುದರಲ್ಲಿ ಯಾವುದೇ ರಾಜೀ ಬೇಡ, 2000 ಕೋಟಿ ಮೌಲ್ಯದ ವಕ್ಫ್‌ ಆಸ್ತಿ ಖಾಸಗಿಯವರ ವಶದಲ್ಲಿದೆ, ಅದನ್ನು ಮರಳಿ ಪಡೆಯುವವರೆಗೂ ನೀವು ಸುಮ್ಮನೆ ಕೂರಬಾರದು, ನಿಮ್ಮ ಜೊತೆ ನಾವಿದ್ದೇವೆ” ವಕ್ಫ್‌ಮಂಡಳಿಗೆ ಬಿಜೆಪಿ ಬೆಂಬಲವಾಗಿ ನಿಂತಿತ್ತು. ರೈತರ ಭೂಮಿಯನನ್ನು ಕಬಳಿಸಲು ಹೇಳಿದ್ದೇ ಅಂದಿನ ಮುಖ್ಯಮಂತ್ರಿಗಳಾದ ಬಸವರಾಜ್‌ ಬೊಮ್ಮಾಯಿ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಎರಡು ನಾಲಿಗೆಯನ್ನು ಹೊಂದಿರುವ ಬಿಜೆಪಿಗರಿಗೆ ಒಂದಷ್ಟು ಪ್ರಶ್ನೆಗಳನ್ನು ಹಾಕಿದ್ದಾರೆ. ವಕ್ಫ್‌ಮಂಡಳಿ ನೋಟಿಸ್‌ ನೀಡಿರುವುದಕ್ಕೆ ಬೊಮ್ಮಾಯಿಯವರ ನಿರ್ದೇಶನ ಕಾರಣವಲ್ಲವೇ? ವಕ್ಫ್‌ ಭೂಮಿ ವಿಚಾರದಲ್ಲಿ ಬಿಜೆಪಿಯವರ ದ್ವಂದ್ವ ನಿಲುವೇಕೆ? ಬಿಜೆಪಿಯ ಬೆಂಬಲ ಪರವೋ ಇಲ್ಲ ಭೂಮಿ ಹಿಡುವಳಿದಾರರ ಪರವೋ?ಹಿಂದೆ ಬಿಜೆಪಿಯ ಅಧಿಕಾರಾವಧಿಯಲ್ಲಿ ನೀಡಿರುವ ನೋಡಿಸನ್ನು ಮರೆಮಾಚುತ್ತಿರುವುದಯ ಯಾಕೆ?ಬೊಮ್ಮಾಯಿಯವರ ಆದೇಶದಿಂದಲೇ ವಕ್ಫ್‌ಭೂಮಿ ವಶಕ್ಕೆ ಮುಂದಾಗಿರುವುದಲ್ಲವೇ? ಹಿಪಾಕ್ರಸಿ ಮತ್ತು ಡಬಲ್‌ ಸ್ಟ್ಯಾಂಡರ್ಡಿವು ಬಿಜೆಪಿಯ ಬಿಲಾದಲ್ಲಿ ಬಚ್ಚಿಕ್ಕಿಕೊಂಡಿವೆಯೇ ಅಥವಾ ಬಿಜೆಪಿಯವರ ಬುದ್ದಿಯಲ್ಲಿವೆಯೇ? ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *