ಬೆಂಗಳೂರು: ಕನ್ನಡ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ. ರಾಕಿಂಗ್ ಸ್ಟಾರ್ ಯಶ್ ನಟನೆ ಮಾಡುತ್ತಿರುವ ʼಟಾಕ್ಸಿಸ್ʼ ಸಿನಿಮಾದ ಚಿತ್ರಿಕರಣದ ವೇಳೆ ನೂರಾರು ಮರಗಳನ್ನು ಕಟ್ ಮಾಡಿರುವ ಆರೋಪ ಕೇಳಿಬಂದಿದೆ .
ನಗರದ ಹೆಚ್.ಎಂ.ಟಿ ಅರಣ್ಯ ಪ್ರದೇಶದಲ್ಲಿ ʼಟಾಕ್ಸಿಸ್” ಸಿನಿಮಾದ ಚಿತ್ರಿಕರಣ ನಡೆಯುತ್ತಲಿದ್ದು ದೊಡ್ಡ ಸೆಟ್‌ನ್ನು ನಿರ್ಮಿಸಲು ಮತ್ತು ಶೂಟಿಂಗ್ ಸೆಟ್‌ನ ನಿರ್ಮಾಣಕ್ಕೆ ಅರಣ್ಯದಲ್ಲಿರುವಂತಹ ನೂರಾರು ಮರಗಳನ್ನು ಕಡೆಯಲಾಗಿರುವುದು ಬೆಳಕಿಗೆ ಬಂದಿದೆ.
ಮರ ಕಡಿದಿರುವ ವಿಚಾರವಾಗಿ ಅರಣ್ಯ ಸಚಿವರಾಗಿರುವ ಈಶ್ವರ್‌ಖಂಡ್ರೆಯವರೇ ಸ್ವತಃ ಮರ ಕಟಾವು ಮಾಡಿರುವ ಸ್ಥಳಕ್ಕೆ ಬೇಟಿ ನೀಡಿಪರಿಶೀಲನೆ ಮಾಡಿದ್ದಾರೆ.ಮರ ಕಡಿದವರ ವಿರುದ್ದ ಅಪರಾಧದ ಅಡಿಯ ಕೇಸ್ ದಾಖಲಿಸಿ ಕ್ರಮವನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ.