ಬಿಗ್‌ಬಾಸ್ ಸೀಜನ್ 11 ರಲ್ಲಿದ್ದ ಕಿರುತೆರೆ ನಟಿ ಹಂಸ 10 ನೇ ಸ್ಈಪರ್ಧಿಯಾಗಿ ಮನೆಗೆ ಎಂಟ್ರಿಯಾಗಿದ್ದರು.ಮೊದಲ ವಾರವೇ ನಾಯಕಿಯಾಗಿರುವ ಹಂಸಾ ಲಾಯರ್ ಜಗದೀಶ್ ಜೋಡಿ ಎಲ್ಲಗ ಮನ ಸೆಳೆದಿತ್ತು.ಆದರೆ ಅವರು ಹೆಚ್ಚು ದಿನಗಳ ಕಾಲ ಮನೆಯಲ್ಲಿರಲು ಸಾದ್ಯವಾಗಲಿಲ್ಲ. ವಾರ ದೊಡ್ಮನೆಯಿಂದ ನಾಲ್ಕನೇ ಸ್ಪರ್ಧಿಯಾಗಿ ಹೊರಬಂದಿದ್ದಾರೆ. 4 ವಾರಗಳ ಕಾಲ ದೊಡ್ಮನೆಯಲ್ಲಿದ್ದ ಹಂಸಾರವರು ಕೊನೆಯ ಕ್ಷಣಗಳಲ್ಲಿ ಆಚೆ ಬಂದಿದ್ದಾರೆ.
ಬಿಗ್‌ಬಾಸ್ ಮನೆಯಿಂದ ಎಲಿಮಿನೆಟೆಡ್ ಆಗಿ ಹೊರ ಬಂದ ಸ್ಪರ್ಧಿಗಳು ಸಂದರ್ಶನ ನೀಡುತ್ತಾರೆ. ಅದೇ ವೇಳೆಯಲ್ಲಿ ಲಾಯರ್ ಜಗದೀಶ್ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.ಬಿಗ್‌ಬಾಸ್ ಮನೆಯಲ್ಲಿ ಹಂಸಾ ಮತ್ತು ಲಾಯರ್ ಜಗದೀಶ್ ಸ್ನೇಹಿತರಾಗಿದ್ದೇವು. ಗಲಾಟೆ, ವಾದ-ವಿವಾದಗಳನ್ನು ಮಾಡ್ತಾ ಒಳ್ಳೆಯ ಜೋಡಿಯಾಗಿ ಕೂಡಾ ಕಾಣಿಸಿಕೊಂಡಿದ್ದೇವು. ನಂತರ ಸುದೀಪ್ ಪಂಚಾಯ್ತಿಯ ವೇಳೆ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ರಿ. ಆದರೆ ಹೆಚ್ಚು ದಿನಗಳ ಕಾಲ ಆ ಮನೆಯಲ್ಲಿ ಉಳಿಯಲು ಸಾದ್ಯವಾಗಲಿಲ್ಲ. ಇನ್ನೂ ಅಲ್ಲೇ ಇದ್ದಿದ್ದರೆ ವೀಕ್ಷಕರ ಮುಖದಲ್ಲಿ ನಗುವನ್ನು ತರಬಹುದಿತ್ತು ಎಂದಿದ್ದಾರೆ.
ಲಾಯರ್ ಜಗದೀಶ್ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ಕಾರಣ ಬಿಗ್‌ಬಾಸ್ ಮನೆಯಿಂದ ಹೊರಬಂದರು.ಲಾಯರ್ ಜಗದೀಶ್ ಅವರನನು ಕಾಲಿನಿಂದ ತಳ್ಳಿರುವುದಕ್ಕೆ ರಂಜಿತ್ ಕೂಡಾ ಮನೆಯಿಂದ ಆಚೆ ಬಂದರು. ಎಂದಿರುವ ಹಂಸಾ ಲಾಯರ್ ಜಗದೀಶ್ ಬಿಗ್‌ಬಾಸ್ ಮನೆಗೆ ಮತ್ತೆ ಹೋಗಬೇಕು ಎಂದು ಹೇಳಿದ್ದಾರೆ.
ಲಾಯರ್ ಜಗದೀಶ್‌ರವರ ಜೊತೆಗೆ ಮಾತನಾಡಲು ಬಿಗ್‌ಬಾಸ್ ಮನೆಯಲ್ಲಿ ಅವಕಾಶ ಸಿಕ್ಕಿಲ್ಲ. ನಾನು ಆ ಮನೆಯಿಂದ ಔಟ್ ಆಗಿದ್ದೇನೆ. ಆದ್ದರಿಂದ ಜಗದೀಶ್ ಮನೆಗೆ ಹೋಗಿ ಅವರ ಜೊತೆ ಮಾತನಾಡಿ ಯಾಕೆ ನನ್ನ ಬಗ್ಗೆ ಆ ರೀತಿ ಹೇಳಿಕೆ ನೀಡಿದ್ರಿ? ಎಂದು ಪ್ರಶ್ನೆ ಮಾಡುತ್ತೇನೆ. ಬಿಗ್‌ಬಾಸ್ ಮನೆಗೆ ಲಾಯರ್ ಜಗದೀಶ್ ವೈಲ್ಡ್ ಕಾರ್ಡ್ ಮೂಲಕ ಮನೆಯನ್ನು ಪ್ರವೇಶಿಸಿ ಗೆಲುವು ಪಡೆಯುತ್ತಾರೆ.ಲಾಯರ್ ಜಗದೀಶ್ ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿದ್ರೆ ಚೆನ್ನಾಗಿರುತ್ತದೆ. ಬಿಗ್‌ಬಾಸ್ ಮನೆಗೆ ಮತ್ತೆ ಹೋಗ್ಬಹುದು ಎಂದೆನಿಸುತ್ತದೆ ನೋಡೋಣ.
ಲಾಯರ್ ಜಗದೀಶ್ ಮಾತನಾಡುವಾಗ ಎಚ್ಚರಿಕೆವಹಿಸಿ, ಮಾತಿನಲ್ಲಿ ಹಿಡಿತ ಇದ್ರೆ ಅವರೇ ವನ್ ಆಗ್ತಾರೆ ಎಂದು ಹೇಳಿದ್ದಾರೆ.