ಬಿಗ್‌ಬಾಸ್ ಕಾರ್ಯಕ್ರಮವೂ ಪ್ರಾರಂಭವಾಗಿದ್ದು ಶೋ ಕುರಿತು ಪರ-ವಿರೋದದ ಚರ್ಚೆಗಳು ನಡೆಯುತ್ತಿವೆ.ದೊಡ್ಮನೆಯ ಅಭ್ಯರ್ಥಿಗಳಿಗೆ ಹೊರಗಿನ ಯಾವ ವಿಷಯಗಳಾಗಲೀ, ವಿಚಾರಗಳಾಗಲೀ, ಶೋ ಮುಗಿಯುವವರೆಗೆ ತಿಳಿಯುವುದಿಲ್ಲ. ಆದರೆ ನಟ ಸುದೀಪ್ ತಾಯಿ ನಿಧನದ ನಂತರ ಕಿಚ್ಚ ಗೈರಾಗಿರುವುದರಿಂದ ವಾರ ಬದಲಾಗಿ ಬಿಗ್‌ಬಾಸ್ ಮನೆಗೆ ಸೃಜನ್ ಲೋಕೇಶ್ ಅತಿಥಿಯಾಗಿ ಬಂದಿದ್ದರು.
ಸೃಜನ್ ಲೋಕೇಶನ್‌ರನ್ನು ಕಂಡು ಧರ್ಮ ತುಂಬಾ ಸಂತೋಷವಾಗಿದ್ದರು.ಏಕೆಂದರೆ ಈ ಹಿಂದೆ ಇಬ್ಬರೂ ಜೊತೆಯಲ್ಲಿ ಸಿನಿಮಾದಲ್ಲಿ ನಟಿಸಿದ್ದರು.
ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಎಂಟ್ರಿಯಾದ ಸೃಜನ್ ಧರ್ಮರವರನ್ನು ಮಾತನಾಡಿಸಿ ನಿಮಗೊಂದು ಗುಡ್‌ನ್ಯೂಸ್ ಇದೆ.
ಏನೆಂದರೆ ನವಗ್ರಹ ಸಿನಿಮಾ ರೀ-ರಿಲೀಸ್ ಆಗ್ತೀದೆ ಎಂದಿದ್ದಾರೆ.ಈ ವಿಷಯವನ್ನು ಕೇಳಿದ ಧರ್ಮರಾಜ್‌ಯಾವಾಗ ಎಂದು ಪ್ರಶ್ನಿಸಿದ್ದಾರೆ.ನವೆಂಬರ್ 8ಕ್ಕೆ ಎಂದು ಸೃಜನ್ ಉತ್ತರಿಸಿದ್ದಾರೆ. ಇದನ್ನು ಕೇಳಿದ ಧರ್ಮ ತುಂಬಾ ಖುಷಿಯಾಗಿದ್ದಾರೆ.
ದರ್ಶನ್ ನಟನೆ ಮಾಡಿರುವ ʼನವಗ್ರಹʼ ಸಿನಿಮಾವು 16 ವರ್ಷಗಳ ಹಿಂದೆಯೇ ಅಂದರೆ ನವೆಂಬರ್ 7.11.2008ರಲ್ಲಿ ಟಿಲೀಸ್ ಆಗಿತ್ತು.ಈ ಚಿತ್ರವನ್ನು ದಿನಕರ್ ತೂಗುದೀಪ್ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೃಜನ್ ಲೋಕೇಶ್, ಧರ್ಮ ಕೀರ್ತಿರಾಜ್, ವರ್ಷಾ, ಶರ್ಮಿಳಾ ಮಾಂಡ್ರೆ, ತರುಣ್‌ಸುದೀರ್, ವಿನೋದ್ ಪ್ರಭಾಕರ್,ನಾಗೇಂದ್ರ, ನಟಿಸಿದ್ದಾರೆ.