ಸೀತಾರಾಮಂ ಚಿತ್ರದಲ್ಲಿ ನಟಿಸಿರುವ ನಟಿ ಮೃಣಾಲ್ ಥಾಕೂರ್ ನಟಿಸಿರುವ 3 ಸಿನಿಮಾಗಳು ಹಿಟ್ ಆಗಿದ್ದು, ಇದೀಗ ಅವರು ತಮಿಳು ಚತ್ರರಂಗಕ್ಕೆ ಪ್ರವೇಶವನ್ನು ನೀಡುತ್ತಿದ್ದು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಸ್ಟಾರ್ ನಟ ಸೂರ್ಯ ನಟಿಸಲಿರುವ ಹೊಸ ಚಿತ್ರಕ್ಕೆ ನಟಿ ಮೃಣಾಲ್ ಥಾಕೂರ್ ನಾಯಕಿಯಾಗಿ ಆಯ್ಕೆಯಾಗಿರುವ ಸುದ್ದಿ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ.
ನಟ ಸೂರ್ಯ ನಟಿಸಲಿರುವ ಸಿನಿಮಾವೂ ಪ್ಯಾಂಟಸಿ ಥ್ರಿಲ್ಲರ್ನ ರೀತಿಯಲ್ಲಿ ಮೂಡಿ ಬರುತ್ತಿದ್ದು ಈ ಸಿನಿಮಾವನ್ನು ಬಾಲಾಜಿ ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿದುಬಂದಿದ್ದು, ಚಿತ್ರರಂಗದ ವತಿಯಿಂದ ಅಧೀಕೃತವಾಗಿ ಘೋಷಣೆಯಾಗಬೇಕಿದೆ ಎಂದು ಮೂಲಗಳು ತಿಳಿಸಿವೆ.
ನಟಿ ಮೃಣಾಲ್ ಥಾಕೂರ್ರವರಿಗೆ ಈ ಹಿಂದೆಯೇ ʼಕಂಗುವʼಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿದ್ದರೂ, ಹಿಂದೆ ಒಪ್ಪಿಕೊಂಡಿರುವ ಸಿನಿಮಾಗಳ ಕಾರಣದಿಂದ ಈ ಚಿತ್ರದಲ್ಲಿ ನಟಿಸುವ ಅವಕಾಶದಿಂದ ವಂಚಿತರಾಗಿದ್ದರು. ಅವರ ಬದಲಾಗಿ ದಿಶಾ ಪಟಾನಿ ನಟಿಸಿದ್ದಾರೆ.
ಈ ನಟಿಯು ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ನಟಿ ಮೃಣಾಲ್ ಥಾಕೂರ್ ಹೇ ಜವಾನಿ ತೋ ಇಷ್ಟ ಹೋನಾ ಹಿ, ತುಮ್ ಓಹ್ ಹೋ,ಮತ್ತು ಪೂಜಾ ಮೇರಿ ಜಾನ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.