ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್ಬಾಸ್ ರಿಯಾಲಿಟಿ ಶೋ ಮಾದ್ಯಮಲೋಕದಲ್ಲಿನ ಟಿಆರ್ಪಿಯನ್ನು ಹಿಂದಿಕ್ಕಿ ರೇಸ್ ಕುದುರೆಯಂತೆ ಓಡುತ್ತಿದೆ. ಬಿಗ್ಬಾಸ್ ಸೀಜನ್ 1 ರಿಂದ 10ರವರೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದರು.
ಆದರೀಗ ತಾಯಿಯನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಸುದೀಪ್ಈ ವಾರ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಿಲ್ಲ. ಬಿಗ್ಬಾಸ್ 11 ಪ್ರಾರಂಭವಾದಾಗಿನಿಂದಲೂ ಒಂದಲ್ಲ ಒಂದು ರೀತಿ ಬದಲಾವಣೆಗಳಾಗುತ್ತಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದು, ಈ ಕಾರ್ಯಕ್ರಮವನ್ನು ಯಾರು ನಿರೂಪಣೆಯನ್ನು ಮಾಡ್ತಾರೆ ಎಂಬುದರ ಮಾಹಿತಿ ಇಲ್ಲಿದೆ.
ಬಿಗ್ಬಾಸ್ ಕಾರ್ಯಕ್ರಮ ಜನರಿಗೆ ಮನರಂಜನೆಯನ್ನು ನೀಡಿದರೆ ವಾರದ ಕೊನೆಯಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್ ಎಷ್ಟು ಪ್ರಭುದ್ದವಾಗಿ ಸಮಸ್ಯೆಗಳಿಗೆ ಪರಿಹಾರ ನೀಡ್ತಾರೆ ಮತ್ತು ಅವರ ತಪ್ಪುಗಳನ್ನು ತಿಳಿಸಿ ಶಿಕ್ಷಕನಂತೆ ಬೈದು ಬುದ್ದಿ ಹೇಳುತ್ತಿದ್ದರು.ಆದ್ರೆ ಈ ಎರಡು ದಿನ ಕಿಚ್ಚ ಸುದೀಪ್ ಬರುವುದಿಲ್ಲೆನ್ನುವುದು ವೀಕ್ಷಕರಲ್ಲಿ ಬೇಸರವನ್ನುಂಟು ಮಾಡಿದೆ.
ಈ ವಾರದ ಬಿಗ್ಬಾಸ್ ಕಾರ್ಯಕ್ರಮವನ್ನು ಸುದೀಪ್ ನಡೆಸಿಕೊಟ್ಟಿಲ್ಲವೆಂದರೆ ಯಾರು ಹೋಸ್ಟ್ ಮಾಡ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿದೆ. ಮಾಹಿತಿ ಪ್ರಕಾರ ಯೋಗರಾಜ್ಭಟ್ ಮತ್ತು ಸೃಜನ್ ಲೋಕೇಶ್ ಕಾರ್ಯಕ್ರಮವನ್ನು ನಡೆಸಿಕೊಡ್ತಾರೆ ಎಂಬ ಮಾಹಿತಿ ಬಂದಿದೆ ಎನ್ನಲಾಗಿದೆ.