ಬೆಂಗಳೂರು: ಬೆಳಗ್ಗೆಯಿಂದಲೂ ಕೊಂಚ ಬಿಡುವು ನೀಡಿದ ಮಳೆರಾಯ ಮತ್ತೆ ತನ್ನ ಅರ್ಭಟವನ್ನು ಶುರುವಿಟ್ಟಿದ್ದಾನೆ.ನಗರದಲ್ಲಿ ಮತ್ತೆ ಗುಡುಗು ಮಿಂಚು ಸಹಿತ ಮಳೆಯಾಗಿದ್ದು ಜನರು ಪರದಾಡುವಂತಾಗಿದೆ.
ನಗರದಲ್ಲಿಂದು ಬೆಳಗ್ಗೆ ಎಲ್ಲೊ ಒಂದೊಂದು ಕಡೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಬಂದುಹೋಗಿದ್ದು, ಒಮ್ಮೊಮ್ಮೆ ಬಿಸಿಲು ಕಾಣಿಸಿಕೊಂಡು ಮತ್ತೆ ಮೋಡ ಕವಿದ ವಾತವರಣವಿತ್ತು.ಸಂಜೆಯಾಗುತ್ತಿದ್ದಂತೆ ಮತ್ತೆ ಮಳೆಯಾಗಿ ಜನರ ಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆಗಳು , ಕಾಲುವೆಗಳು ತುಂಬಿ ಹರಿಯುತ್ತಿವೆ. ವಾಹನ ಸವಾರರ ಪಾಡು ಯಾರು ಕೇಳದ ರೀತಿಯಲ್ಲಿದೆ.
ಹೆಚ್ಚು ಮಳೆಯಾಗಿರುವುದರಿಂದ ಮಾರ್ಕೆಟ್, ಮೆಜೆಸ್ಟಿಕ್,ಮೈಸೂರು ರಸ್ತೆ, ಕಾರ್ಪೋರೇಷನ್, ವಿದಾನಸೌಧ ಸೇರಿದಂತೆ ಜಲಾವೃತವಾಗಿವೆ.ಹೆಚ್ಚು ಮಳೆಯ ಅವಾಂತರದಿಂದ ಮರಗಳು ಧರೆಗುರುಳಿ ಸಂಚಾರಕ್ಕೆ ಸಂಚಕಾರವನ್ನು ತಂದೊಡ್ಡಿದೆ ಎನ್ನಲಾಗಿದೆ.