ಮುಂಬೈ: ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಅಭಿನಯದ ʼರಾಮಾಯಣ” ಚಲನಚಿತ್ರದಲ್ಲಿ ರಾವಣ ಪಾತ್ರದಲ್ಲಿ ನಟ ಯಶ್‌ ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ದಿ ಹಾಲಿವುಡ್‌ ರಿಪೋರ್ಟರ್‌ ಇಂಡಿಯಾದ ಸಂದರ್ಶನವೊಂದರಲ್ಲಿ ಮಾತನಾಡಿದ ರಾಕಿಂಗ್‌ಸ್ಟಾರ್‌ ಯಶ್‌, ರಣಭೀರ್‌ ಕಪೂರ್‌ ನಟಿಸುತ್ತಿರುವ ನಿತೇಶ್‌ ತಿವಾರಿ ನಿರ್ದೇಶನದಲ್ಲಿ ಮೂಡಿಬರುವ ರಾಮಾಯಣ ಚಲನಚಿತ್ರದಲ್ಲಿ ನಾನು ರಾವಣನ ಪಾತ್ರದಲ್ಲಿ ನಟನೆ ಮಾಡುತ್ತಿರುವುದು ನನಗೆ ಸಂತೋಷವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಹಿಂದಿ ಚಲನಚಿತ್ರವಾದ ರಾಮಾಯಣದಲ್ಲಿರಣಬೀರ್‌ ಕಪೂರ್‌ ರಾಮನ ಪಾತ್ರದಾರಿಯಾದರೆ, ನಟಿ ಸಾಯಿಪಲ್ಲವಿ ಸೀತೆಯ ಪಾತ್ರವನ್ನು ಮಾಡುತ್ತಿದ್ದು, ನಾನು ರಾವಣನಾಗಿ ಅಭಿನಯಿಸುತ್ತಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ರಾಮಾಯಣದಲ್ಲಿ ನಾನು ಒಂದು ಭಾಗವಾಗಿರುವುದು ಮತ್ತು ಆ ಪಾತ್ರದಲ್ಲಿ ನಟಿಸಲು ತುಂಬಾ ಉತ್ಸಾಸದಿಂದ ಇದ್ದೇನೆ.

ʼರಾವಣʼನ ಪಾತ್ರ ತುಂಬಾ ಅದ್ಬುತ. ರಾಮಾಯಣದಲ್ಲಿ ಯಾವ ಪಾತ್ರ ಮಾಡ್ತೀರಾ ಎಂದು ಕೇಳಿದರೆ ರಾವಣನ ಪಾತ್ರವನ್ನು ಮಾಡುತ್ತೇನೆಂದು ಹೇಳುತ್ತಿದ್ದೆ. ಒಬ್ಬ ನಟನಾಗಿ ರಾವಣನ ಪಾತ್ರ ಪೋಷಿಸುವುದು ಚಾಲೆಂಜಿಂಗ್‌ಆಗಿದೆ.ಇದೊಂದು ಬೃಹತ್‌ ಮಟ್ಟದ ಸಿನಿಮಾವಾಗಿದ್ದು ನನ್ನ ಪಾತ್ರಕ್ಕೆ ಪ್ರಾಮಾಣಿಕವಾದಂತಹ ನ್ಯಾಯವನ್ನು ಒದಗಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ರಾಮಾಯಣ ಸಿನಿಮಾದಲ್ಲಿ ರಾಮನಾಗಿ, ರಣಬೀರ್‌ ಕಪೂರ್‌, ಸೀತೆಯಾಗಿ ದಕ್ಷಿಣ ಚಿತ್ರರಂಗದ ನಟಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ ಎನ್ನಲಾಗಿದೆ.

Leave a Reply

Your email address will not be published. Required fields are marked *