ಧಾರವಾಡ: ಬೈಎಲೆಕ್ಷನ್ ಟಿಕೆಟ್ ಹಂಚಿಕೆ ವಿಚಾರದ ಕುರಿತು ಕಾಂಗ್ರೆಸ್‌ನಲ್ಲಿ ಸಭೆ ನಡೆಸಿದ್ದು,ಸಿಎಂ, ಸಚಿವರು ಮತ್ತು ಡಿಸಿಎಂ ಸೇರಿದಂತೆ ಚರ್ಚೆಯನ್ನು ನಡೆಸಿ ಅಭಿಪ್ರಾಯಗಳನ್ನು ಮಂಡಿಸಿದ್ದು ನಾಳೆ ಹೈಕಮಾಂಡಿನಿಂದ ಅಂತಿ ತೀರ್ಮಾನ ಬರಲಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಶಿಗ್ಗಾಂವಿ ಟಿಕೆಟ್ ವಿಚಾರದ ಕುರಿತು ಮಾತನಾಡಿದ ಅವರು ನನ್ನ ಅಭಿಪ್ರಾಯವನ್ನು ಈಗಾಗಲೇ ತಿಳಿಸಿದ್ದೇನೆ.ಇನ್ನೇನಿದ್ದರೂ ಹೈಕಮಾಂಡಿನಿಂದ ತೀರ್ಮಾನ ಹೊರಬರಬೇಕಿದೆ ಅದೇ ಫೈನಲ್ ಎಂದಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ್ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಆ ಕ್ಷೇತ್ರದ ಮಾಹಿತಿ ಇಲ್ಲ. ನಮ್ಮ ಅಧ್ಯಕ್ಷರಿಗೆ ಮತ್ತು ಸಿಎಂಗೆ ಜವಾಬ್ದಾರಿಯಿದೆ.ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧವಾಗಿರುತ್ತೇವೆ.ಈ ಸಲ ಮೂರು ಕ್ಷೇತ್ರಗಳಲ್ಲಿ 3 ಸ್ಥಾನಗಳಲ್ಲಿ ಗೆಲ್ಲುವ ಭರವಸೆಯಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.