ನನ್ನ ಸಿನಿಮಾದ ಜರ್ನಿಯಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದರೂ ನನ್ನ ಅಮ್ಮ ನನಗೆ ಮೆಚ್ಚಿನ ಅಭಿಮಾನಿಯಾಗಿದ್ದರು ಅವರ ಅಭಿಮಾನವೂ ನನ್ನ ಮನಸ್ಸಿನಲ್ಲಿ ಹೆಚ್ಚು ಉಲ್ಲಾಸ ಮೂಡಿಸುತ್ತಿತ್ತು.ಅವರು ನನ್ನ ಜೊತೆಯಿಲ್ಲವೆಂಬುದು ಕೊರಗಾಗಿದೆ. ಅಮ್ಮ ಈ ಲವ್‌ ಯು, ಈ ಮಿಸ್‌ ಯು ಅಮ್ಮ ಎಂದು ಕಿಚ್ಚ ಸುದೀಪ್‌ರವರು ಅಮ್ಮನ ಬಗ್ಗೆ ದೀರ್ಘವಾದ ಪತ್ರವನ್ನು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡಿದ್ದಾರೆ.

ನನ್ನ ಮೊದಲ ಅಚ್ಚಮೆಚ್ಚಿನ ಅಭಿಮಾನಿ, ಅವರ ಅಭಿಮಾನವನ್ನೂ ದಿನನಿತ್ಯ ವ್ಯಕ್ತಪಡಿಸುತ್ತಿದ್ದರು. ನಾನೇನಾದ್ರೂ ತಪ್ಪು ಮಾಡದ್ರೆ ತಿದ್ದಿ-ತೀಡಿ ಶಿಕ್ಷಕಿಯಂತೆ ಪಾಠ ಮಾಡುತ್ತಿದ್ದರು. ಸದಾ ನನಗೆ ಒಳಿತನ್ನೇ ಬಯಸುತ್ತಿದ್ದರು.ನಾನು ಪ್ರತಿದಿನ ಕೆಲಸಕ್ಕೆ ಹೊರಡುವಾಗ ಒಂದು ಟೈಟ್‌ ಹಗ್‌ ಮಾಡಿ ಕಳುಹಿಸುತ್ತಿದ್ದರು.

ನನ್ನ ತಾಯಿ ನನ್ನ ಮೊದಲ ಗುರು. ನನಗೆ ಬದುಕಿನ ಪಾಠವನ್ನು ಕಲಿಸಿಕೊಟ್ಟ ಟೀಚರ್.‌ ಬದುಕಿನಲ್ಲಿ ಹೇಗೆ ಇರಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ.

ನನ್ನಮ್ಮ ಹೇಳಿಕೊಟ್ಟ ಹಾಗೆ ಇಂದಿಗೂ ನನ್ನ ಜೀವನದಲ್ಲಿ ಅಳವಡಿಸಿಕೊಂಡು ಬಂದಿದ್ದೇನೆ. ಇದೀಗ ನನ್ನ ಫೇವರೇಟ್‌ ಅಭಿಮಾನಿ ನನ್ನೊಟ್ಟಿಗೆ ಇಲ್ಲ ಎಂಬ ನೋವು ಕಾಡುತ್ತಿದೆ. ಅಧ್ಬುತ ಅಭಿಮಾನಿ ನನ್ನನ್ನಗಲಿ ಹೋಗಿದ್ದಾರೆ.

ನನ್ನ ಅಮ್ಮ ನನ್ನ ಜೀವನದಲ್ಲಿ ಅಮೂಲ್ಯವಾದ ವಜ್ರವಾಗಿದ್ದರು. ನನ್ನ ಜೀವದ ಸಂಭ್ರಮ ನಮ್ಮ ಅಮ್ಮ, ಅವರಿಲ್ಲದ ಬದುಕನ್ನು ನೆನಪು ಮಾಡಿಕೊಂಡ್ರೆ ನೋವಾಗುತ್ತದೆ. ಅಮ್ಮ ಈವ್‌ ಯು…ಅಮ್ಮ ಐ ಮಿಸ್‌ ಯು…ಹೀಗೆ ತಮ್ಮ ಟ್ವೀಟ್ಟರ್‌ ಅಕೌಂಟಿನಲ್ಲಿ ಅಮ್ಮನ ಮೌಲ್ಯವನ್ನು ಪತ್ರದ ಮೂಲಕ  ಬರೆದಿದ್ದಾರೆ

Leave a Reply

Your email address will not be published. Required fields are marked *