ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 11ರಲ್ಲಿ ನಡೆಯುತ್ತಿರುವ ಜಗಳಗಳ ವಿಚಾರಕ್ಕೆ ಎಲ್ಲೆಡೆಯಲ್ಲಿಯೂ ಚರ್ಚೆಗಳು ಶುರುವಾಗಿವೆ.ಈ ಕಾರ್ಯಕ್ರಮದಲ್ಲಿ ಈಗಾಗಲೇ ಮೂರು ಸ್ಪರ್ಧಿಗಳು ಹೊರಹೋಗಿದ್ದು, ಇಬ್ಬರು ಸ್ಪರ್ಧಿಗಳ ನಡುವೆ ಮರಾಮರಿ ನಡೆದಿದ್ದು ವಿಕೋಪಕ್ಕೆ ಹೋಗುವ ಮುನ್ನ ಬಿಗ್‌ಬಾಸ್ ಅವರನ್ನು ಹೊರಕಳಿಸಿದ್ದಾರೆ ಎನ್ನಲಾಗಿದೆ. ಇದರ ನಡುವೆ ಮನೆಗೆ ಹೊಸ ಅತಿಥಿಯು ಬಂದಿದ್ದಾರೆ.ಅವರು ಯಾರೆಂದರೆ ಪ್ರಸಿದ್ದ ಜನಪ್ರಿಯ ಗಾಯಕ ಹನುಮಂತ ಮನೆಯೊಳಗೆ ಭೇಟಿ ನೀಡಿದ್ದು,ಎಂಟ್ರಿಯಾದ ದಿನವೇ ಕ್ಯಾಪ್ಟನ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ.ಇದರಿಂದ ಸ್ಪರ್ಧಿಗಳ ನಡುವೆ ಅಸಮಾಧಾನವಾಗಿದ್ದು, ನಾಯಕ ಹನುಮಂತನ ಮೇಲೆ ಆಕ್ರೋಶವನ್ನು ಹೊರಹಾಕಿದ್ದಾರೆ.
ಮನೆಗೆ ಬಂದಿರುವ ಅತಿಥಿಗೆ ಕ್ಯಾಪ್ಟನ್ ಪಟ್ಟ ನೀಡಿದ್ದು ಹೊಸ ಟಾಸ್ಕ್‌ಒಂದನ್ನು ನೀಡಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ನಂಬರುಗಳನ್ನು ನೀಡಿರುವ ಹನುಮಂತುವಿನ ಮೇಲೆ ಸ್ಪರ್ಧಿಗಳು ಕೂಗಾಡಿದ್ದು, ನನಗ್ಯಾಕೆ ಈ ನಂಬರ್ ನೀಡಿದೆ ಎಂದು ಪ್ರಶ್ನಿಸಿದ್ದಾರೆ. ಆದ್ದರಿಂದ ಮನನೊಂದ ಹನುಮಂತು ಈ ನಾಯಕ ಸ್ಥಾನ ನನಗೆ ಬೇಡ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.