ಬೆಂಗಳೂರು:ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಮಳೆಯಾಗಿದ್ದು ಮನೆಯಿಂದ ಕೆಲಸಕ್ಕೆ ಹೋಗುವ ವಾಹನ ಸವಾರರರು ಪರದಾಡುವಂತಾಗಿದೆ.
ರಾಜ್ಯ ರಾಜಧಾನಿ ನಗರದ ಹಲವಾರು ರಸ್ತೆಗಳು ನೀರಿನಿಂದ ತುಂಬಿದ್ದು ವಾಹನ ಚಾಲನೆಗೆ ತೊಡಕಾಗಿದೆ.ವಾರದ ಕೊನೆ ದಿನವಾದ್ದರಿಂದ ಟ್ರಾಫಿಕ್ ಇರುತ್ತದೆ ಅದರ ಜೊತೆ ಮಳೆರಾಯನ ಆಗಮನದಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ ಎಂದರೆ ತಪ್ಪಾಗಲಾರದು.
ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಚಂದಾಪುರ, ಮೆಜೆಸ್ಟಿಕ್, ಕಾರ್ಪೋರೇಷನ್ ವೃತ್ತ, ಕೆ.ಆರ್,ಮಾರ್ಕೆಟ್,ವಿಧಾನಸೌಧದ ಸುತ್ತಮುತ್ತ ಬಾರೀ ಮಳೆಯಾಗಿದೆ ಎನ್ನಲಾಗಿದೆ.